ಕಾಂಗ್ರೆಸ್ ನಿಂದ ಹಿಂದುತ್ವದ ಜಪ: ಚತ್ತೀಸ್ ಗಢದಲ್ಲಿ ಸರ್ಕಾರದಿಂದ ರಾಮನವಮಿ ಆಚರಣೆ
ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಮೃದು ಹಿಂದುತ್ವದ ಮೊರೆ ಹೋಗಲು ಯತ್ನಿಸುತ್ತಿದೆ. ಇದರ ಭಾಗವಾಗಿ ಚತ್ತೀಸ್ ಗಢದ ಕಾಂಗ್ರೆಸ್ ನೇತೃತ್ವದ ಸರ್ಕಾರ ಏ.10 ರಂದು ರಾಮನವಮಿಯನ್ನು ಆಚರಿಸಿದೆ.
Published: 10th April 2022 12:42 PM | Last Updated: 10th April 2022 12:42 PM | A+A A-

ರಾಮನವಮಿ ಆಚರಣೆ
ರಾಯ್ ಪುರ: ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಮೃದು ಹಿಂದುತ್ವದ ಮೊರೆ ಹೋಗಲು ಯತ್ನಿಸುತ್ತಿದೆ. ಇದರ ಭಾಗವಾಗಿ ಚತ್ತೀಸ್ ಗಢದ ಕಾಂಗ್ರೆಸ್ ನೇತೃತ್ವದ ಸರ್ಕಾರ ಏ.10 ರಂದು ರಾಮನವಮಿಯನ್ನು ಆಚರಿಸಿದೆ.
ಇದಷ್ಟೇ ಅಲ್ಲದೇ ಚತ್ತೀಸ್ ಗಢದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಧಾರ್ಮಿಕ ಪ್ರವಾಸೋದ್ಯಮದತ್ತ ಸರ್ಕಾರ ಹೆಚ್ಚಿನ ಗಮನ ಹರಿಸಿದೆ. ರಾಮ್ ವನ್ ಗಮನ್ ಪ್ರವಾಸೋದ್ಯಮ ಸರ್ಕ್ಯೂಟ್ ಯೋಜನೆಯ ಜಾರಿಯನ್ನು ಸರ್ಕಾರ ತ್ವರಿತಗೊಳಿಸಿದೆ.
ರಾಮ್ ವನ್ ಗಮನ್ ಪ್ರವಾಸೋದ್ಯಮ ಸರ್ಕ್ಯೂಟ್ ಯೋಜನೆಯ ಮೊದಲ ಹಂತದಲ್ಲಿ ಗುರುತಿಸಲಾಗಿದ್ದ ಶಿವ್ರಿನಾರಾಯಣ್ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು ಏ.10 ರಂದು ಮುಖ್ಯಮಂತ್ರಿ ಭುಪೇಶ್ ಬಘೇಲ್ ದೇವಾಲಯವನ್ನು ಉದ್ಘಾಟಿಸಿದ್ದಾರೆ.
ಇದಕ್ಕೂ ಮುನ್ನ ಕಳೆದ ವರ್ಷ ಅಕ್ಟೋಬರ್ ನಲ್ಲಿ ಅತ್ಯಂತ ಪುರಾತನ ಮಾತಾ ಕೌಸಲ್ಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಲೋಕಾರ್ಪಣೆಗೊಳಿಸಲಾಗಿತ್ತು.
ಅಯೋಧ್ಯೆ ಮಾದರಿಯಲ್ಲಿ ಶಿವಿರಿನಾರಾಯಣ್ ದೇವಾಲಯವನ್ನು ಅಭಿವೃದ್ಧಿಡಿಸಿದ್ದೇವೆ. ಚತ್ತೀಸ್ ಗಢ ರಾಮಾಯಣಕ್ಕೆ ಸಂಬಂಧಿಸಿದಂತೆ ವೈಭವಯುತ ಇತಿಹಾಸವನ್ನು ಹೊಂದಿದೆ. ಸರ್ಕಾರ ರಾಮ್ ವನ್ ಗಮನ್ ಪ್ರವಾಸೋದ್ಯಮ ಸರ್ಕ್ಯೂಟ್ ನ ಭಾಗವಾಗಿ 9 ಪ್ರದೇಶಗಳನ್ನು ಅಭಿವೃದ್ಧಿಪಡಿಸಿದ್ದು, ಮಾತಾ ಕೌಸಲ್ಯ ದೇವಾಲಯದ ಬಳಿಕ ಈ ದೇವಾಲಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬಘೇಲ್ ಮಾಹಿತಿ ನೀಡಿದ್ದಾರೆ.