ಶ್ರೀನಗರದಲ್ಲಿ ಎನ್ಕೌಂಟರ್: ಇಬ್ಬರು ಎಲ್ಇಟಿ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ!
ಏಪ್ರಿಲ್ 4ರಂದು ನಗರದಲ್ಲಿ ಸಿಆರ್ಪಿಎಫ್ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಪಾಕಿಸ್ತಾನಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಕಾರ್ಯಾಚರಣೆ ವೇಳೆ ಹೊಡೆದುರುಳಿಸಲಾಗಿದೆ.
Published: 10th April 2022 09:26 PM | Last Updated: 10th April 2022 09:26 PM | A+A A-

ಗುಜರಾತ್: ಬಿಎಸ್ಎಫ್ ನಿಂದ ಪಾಕಿಸ್ತಾನದ ಮೀನುಗಾರಿಕಾ ದೋಣಿ ವಶ
ಶ್ರೀನಗರ: ಏಪ್ರಿಲ್ 4ರಂದು ನಗರದಲ್ಲಿ ಸಿಆರ್ಪಿಎಫ್ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಪಾಕಿಸ್ತಾನಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಕಾರ್ಯಾಚರಣೆ ವೇಳೆ ಹೊಡೆದುರುಳಿಸಲಾಗಿದ್ದು ಇದೇ ವೇಳೆ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 4 ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರ ಮೇಲೆ ದಾಳಿ ನಡೆದ ದಿನದಿಂದ ಪೊಲೀಸರು ಇಬ್ಬರೂ ಪಾಕಿಸ್ತಾನಿ ಭಯೋತ್ಪಾದಕರನ್ನು ಪತ್ತೆ ಹಚ್ಚುತ್ತಿದ್ದರು ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ವಿಜಯ್ ಕುಮಾರ್ ಹೇಳಿದ್ದಾರೆ.
ಇಂದು ಬೆಳಿಗ್ಗೆ 10:50ರ ಸುಮಾರಿಗೆ, ನಗರದ ಬಿಶೆಂಬರ್ ನಗರ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಶ್ರೀನಗರ ಪೋಲೀಸ್ ನೀಡಿದ ನಿರ್ದಿಷ್ಟ ಮಾಹಿತಿ ಮೇಲೆ, ಪೊಲೀಸರು ಮತ್ತು ಸಿಆರ್ಪಿಎಫ್ ಯೋಧರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಸೇನೆ ಶಂಕಿತ ಸ್ಥಳಕ್ಕೆ ತೆರಳುತ್ತಿದ್ದಂತೆ ಅಡಗಿಕೊಂಡಿದ್ದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೇನೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಲಾಗಿದೆ.