ಉಕ್ರೇನ್‌ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ: ಬೈಡನ್ ಜೊತೆಗಿನ ಸಭೆಯಲ್ಲಿ ಮೋದಿ ಆತಂಕ

ಉಕ್ರೇನ್‌ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗಿನ ವರ್ಚುವಲ್ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Published: 11th April 2022 11:52 PM  |   Last Updated: 11th April 2022 11:52 PM   |  A+A-


PM Modi and US President hold virtual meeting

ಬೈಡನ್ ಜೊತೆಗಿನ ವರ್ಚುವಲ್ ಸಭೆಯಲ್ಲಿ ಪ್ರಧಾನಿ ಮೋದಿ

PTI

ನವದೆಹಲಿ: ಉಕ್ರೇನ್‌ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗಿನ ವರ್ಚುವಲ್ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗಿನ ವರ್ಚುವಲ್ ಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದು, 'ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆ್ನ್‌ಸ್ಕಿ ನಡುವೆ ನೇರ ಮಾತುಕತೆಗೆ ಸೂಚಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. 

ಉಕ್ರೇನ್‌ನಲ್ಲಿನ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಉಕ್ರೇನ್‌ನ ಬುಕಾದಲ್ಲಿ ನಾಗರಿಕರ ಹತ್ಯೆಯ ಸುದ್ದಿ ವಿಶೇಷವಾಗಿ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ಅಧ್ಯಕ್ಷರೊಂದಿಗೆ ನೇರ ಮಾತುಕತೆ ನಡೆಸುವಂತೆ ನಾನು ಸೂಚಿಸಿದ್ದೇನೆ.  ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ರಷ್ಯಾದ ಮೇಲೆ ಆರ್ಥಿಕ ಒತ್ತಡವನ್ನು ಹೇರಲು ಅಮೆರಿಕ ಭಾರತದಿಂದ ಹೆಚ್ಚಿನ ಸಹಾಯವನ್ನು ಬಯಸುತ್ತಿರುವಾಗ ಈ ಮಾತುಕತೆ ನಡೆದಿದೆ. ಬೈಡನ್ ಮತ್ತು ಮೋದಿ ಇಬ್ಬರೂ ಉಕ್ರೇನ್‌ನಲ್ಲಿ ವಿಶೇಷವಾಗಿ ಬುಕಾದಲ್ಲಿ ಅನೇಕ ನಾಗರಿಕರನ್ನು ಕೊಲ್ಲಲ್ಪಟ್ಟ ವಿನಾಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದೇವೇಳೆ, ಭಾರತದಿಂದ ರಷ್ಯಾದ ಇಂಧನ ಆಮದುಗಳಲ್ಲಿ ಏರಿಕೆಯನ್ನು ನೋಡಲು ಬಯಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದ್ದು, ಭಾರತ-ಅಮೆರಿಕ ಸಂಬಂಧ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಜಗತ್ತಿನ ಎರಡು ದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವಗಳಾಗಿ, ನಾವು ನೈಸರ್ಗಿಕ ಪಾಲುದಾರರು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. 

ಇತ್ತ ಭಾರತ ಮತ್ತು ಯುಎಸ್ ನಡುವಿನ ಬಲವಾದ ಮತ್ತು ಬೆಳೆಯುತ್ತಿರುವ ರಕ್ಷಣಾ ಪಾಲುದಾರಿಕೆಯನ್ನು ಉಲ್ಲೇಖಿಸಿದ ಬೈಡನ್ ಅವರು, ಬೈಡನ್ ಕೂಡ ಉಕ್ರೇನ್ ಜನರಿಗೆ ಭಾರತದ ಮಾನವೀಯ ಬೆಂಬಲವನ್ನು ಸ್ವಾಗತಿಸಿದರು. ರಷ್ಯಾದ ಯುದ್ಧದ ಪರಿಣಾಮಗಳನ್ನು ಹೇಗೆ ನಿರ್ವಹಿಸುವುದು ಮತ್ತು ಸ್ಥಿರಗೊಳಿಸುವುದು ಎಂಬುದರ ಕುರಿತು ಅಮೆರಿಕ ಮತ್ತು ಭಾರತ ತಮ್ಮ ನಿಕಟ ಸಮಾಲೋಚನೆಯನ್ನು ಮುಂದುವರಿಸಲಿವೆ ಎಂದು ಹೇಳಿದರು.

ವಾಷಿಂಗ್ಟನ್‌ನಲ್ಲಿ ನಡೆಯಲಿರುವ ನಾಲ್ಕನೇ ಭಾರತ-ಅಮೆರಿಕ '2+2' ಸಂವಾದಕ್ಕೆ ಮುನ್ನ ಮೋದಿ-ಬಿಡೆನ್ ಭೇಟಿ ನಡೆದಿದ್ದು, ಇದನ್ನು ಭಾರತದ ಕಡೆಯಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಅವರ ಅಮೆರಿಕ ಸಹವರ್ತಿಗಳಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ರಾಜ್ಯ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ನೇತೃತ್ವ ವಹಿಸಲಿದ್ದಾರೆ.

ಪ್ರಧಾನಿ ಮೋದಿ ಅವರು ಫೆಬ್ರವರಿ 24, ಮಾರ್ಚ್ 2 ಮತ್ತು ಮಾರ್ಚ್ 7 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಎರಡು ಬಾರಿ ಮಾತನಾಡಿದ್ದರು. ಏಪ್ರಿಲ್ 1 ರಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾದ ಮೋದಿ, ಉಕ್ರೇನ್‌ನಲ್ಲಿನ ಸಂಘರ್ಷವನ್ನು ಪರಿಹರಿಸಲು ಶಾಂತಿ ಪ್ರಯತ್ನಗಳಿಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದರು.
 


Stay up to date on all the latest ರಾಷ್ಟ್ರೀಯ news
Poll
CM Basavaraja Bommai is press meet

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತ ಎಂಬ ಭಾವನೆ ಇದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp