ಚಂಡೀಗಢ To ಅಸ್ಸಾಂ: 1,910 ಕಿಮೀ ದೂರವನ್ನು 7 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಬರೆದ ಚಿನೂಕ್ ಹೆಲಿಕಾಪ್ಟರ್!
ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಹೊಸ ದಾಖಲೆ ನಿರ್ಮಿಸಿದೆ. ಚಿನೂಕ್ ತನ್ನ ಹಾರಾಟದ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
Published: 12th April 2022 03:37 PM | Last Updated: 12th April 2022 03:37 PM | A+A A-

ಚಿನೂಕ್ ಹೆಲಿಕಾಪ್ಟರ್
ನವದೆಹಲಿ: ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಹೊಸ ದಾಖಲೆ ನಿರ್ಮಿಸಿದೆ. ಚಿನೂಕ್ ತನ್ನ ಹಾರಾಟದ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಚಿನೂಕ್ ಹೆಲಿಕಾಪ್ಟರ್ ಎಲ್ಲೂ ನಿಲ್ಲದೆ 1,910 ಕಿ.ಮೀ ದೂರವನ್ನು ಕ್ರಮಿಸಿದೆ. ಚಿನೂಕ್ ಚಂಡೀಗಢದಿಂದ ಅಸ್ಸಾಂನ ಜೋರ್ಹತ್ ಗೆ 7 ಗಂಟೆ ಮೂವತ್ತು ನಿಮಿಷಗಳಲ್ಲಿ ತಲುಪಿದೆ ಎಂದು ರಕ್ಷಣಾ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಈ ಹಾರಾಟವು ಹೆಲಿಕಾಪ್ಟರ್ನ ಸುದೀರ್ಘ ಪ್ರಯಾಣವಾಗಿದೆ ಎಂದು ಅವರು ಹೇಳಿದರು.
ಹೆಲಿಕಾಪ್ಟರ್ನ ಸಾಮರ್ಥ್ಯದ ಜೊತೆಗೆ ವಾಯುಪಡೆಯ ಕಾರ್ಯಾಚರಣೆಯ ಯೋಜನೆ ಮತ್ತು ಅನುಷ್ಠಾನದಿಂದಾಗಿ ಇದು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತವು ಅಮೆರಿಕದಿಂದ ಚಿನೂಕ್ ಹೆಲಿಕಾಪ್ಟರ್ಗಳನ್ನು ಖರೀದಿಸಿತ್ತು. ಪ್ರಸ್ತುತ, ಭಾರತದ ಬಳಿ 15 ಚಿನೂಕ್ ಹೆಲಿಕಾಪ್ಟರ್ಗಳಿವೆ.
ಚಿನೂಕ್ ಹೆಲಿಕಾಪ್ಟರ್ಗಳನ್ನು ಹಲವು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ಹೆಲಿಕಾಪ್ಟರ್ ಮೂಲಕ ಸೈನಿಕರು, ಶಸ್ತ್ರಾಸ್ತ್ರಗಳು, ಇಂಧನ ಇತ್ಯಾದಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲಾಗುತ್ತದೆ. ಇದಲ್ಲದೇ, ಯಾವುದೇ ವಿಪತ್ತಿನ ಸಂದರ್ಭದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಈ ಹೆಲಿಕಾಪ್ಟರ್ನ ಸೇವೆಯನ್ನು ತೆಗೆದುಕೊಳ್ಳಲಾಗುತ್ತದೆ.
CH-47F(I) ಚಿನೂಕ್ ಅಡ್ವಾನ್ಸ್ ಮಲ್ಟಿ ಮಿಷನ್ ಹೆಲಿಕಾಪ್ಟರ್ ಆಗಿದೆ. ಈ ಹೆಲಿಕಾಪ್ಟರ್ ಭಾರತೀಯ ಸಶಸ್ತ್ರ ಪಡೆಗಳಿಗೆ ಯುದ್ಧ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ಸಾಟಿಯಿಲ್ಲದ ಯುದ್ಧತಂತ್ರದ ಏರ್ಲಿಫ್ಟ್ ಸಾಮರ್ಥ್ಯವನ್ನು ನೀಡುತ್ತದೆ.
9.6 ಟನ್ ಹೊತ್ತು ಸಾಗುವ ತಾಕತ್ತಿದೆ
ಚಿನೂಕ್ ಹೆಲಿಕಾಪ್ಟರ್ ಸುಮಾರು 9.6 ಟನ್ ತೂಕವನ್ನು ಸುಲಭವಾಗಿ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಹೆಲಿಕಾಪ್ಟರ್ ಮೂಲಕ ಭಾರೀ ಯಂತ್ರೋಪಕರಣಗಳು, ಫಿರಂಗಿ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಸಹ ಸಾಗಿಸಲಾಗುತ್ತದೆ.