
ರೋಪ್ ವೇ ಅವಘಡ, ಜಾರ್ಖಂಡ್
ಜಾರ್ಖಂಡ್: ಜಾರ್ಖಂಡ್ ನ ದಿಯೋಘರ್ ನಲ್ಲಿ ಸಂಭವಿಸಿದ್ದ ರೋಪ್ ವೇ ಅವಘಡದ ಸ್ಥಳದಿಂದ 10 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು ಇನ್ನೂ 5 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.
ಒಟ್ಟು 15 ಮಂದಿ ಪ್ರವಾಸಿಗರು ತ್ರಿಕುಟ್ ಹಿಲ್ಸ್ ಗೆ ತೆರಳಿದ್ದಾಗ ಈ ಅವಘಡ ಸಂಭವಿಸಿತ್ತು. ಅವಘಡ ಸಂಭವಿಸಿದ 40 ಗಂಟೆಗಳ ಬಳಿಕ ಭಾರತೀಯ ವಾಯುಪಡೆ ಚಾಪರ್ ಗಳು ರಕ್ಷಣಾಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಬಲ್ ಕಾರ್ ನಿಂದ ಈ ವರೆಗೂ 50 ಮಂದಿಯನ್ನು ರಕ್ಷಿಸಲಾಗಿದೆ. ರೋಪ್ ವೇ ಅಪಘಾತ ಸಂಭವಿಸಿ ರೋಪ್ ವೇ ಮಾರ್ಗದ ಮಧ್ಯದಲ್ಲೇ ಹಲವರು ಸಿಲುಕಿದ್ದರು.
ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು 12 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತೀಯ ವಾಯುಪಡೆ, ಸೇನೆ, ಐಟಿಬಿಪಿ, ಎನ್ ಡಿಆರ್ ಎಫ್ ಹಾಗೂ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.