ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ ಯುವತಿಯಿಂದ ಆತ್ಮಹತ್ಯೆ ಯತ್ನ; CISF ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಉಳಿದ ಜೀವ!!
ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯೊಬ್ಬಳ ಪ್ರಾಣವನ್ನು ಅಲ್ಲಿನ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಯೋಧರು ರಕ್ಷಣೆ ಮಾಡಿದ್ದಾರೆ.
Published: 14th April 2022 08:43 PM | Last Updated: 14th April 2022 08:43 PM | A+A A-

ಆತ್ಮಹತ್ಯೆಗೆ ಯತ್ನಿಸಿದ ಯುವತಿ
ನವದೆಹಲಿ: ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ (Akshardham Metro Station) ಆತ್ಮಹತ್ಯೆಗೆ (Suicide) ಯತ್ನಿಸಿದ ಯುವತಿಯೊಬ್ಬಳ ಪ್ರಾಣವನ್ನು ಅಲ್ಲಿನ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) (CISF) ಯೋಧರು ರಕ್ಷಣೆ ಮಾಡಿದ್ದಾರೆ.
ಗುರುವಾರ ದೆಹಲಿಯ ಅಕ್ಷರಧಾಮ ಮೆಟ್ರೋ ರೈಲು ನಿಲ್ದಾಣದಲ್ಲಿ ಈ ನಡೆದಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಯುವತಿಯೊಬ್ಬಳು ನಿಲ್ದಾಣದ ಮೇಲಂತಸ್ತಿಗೆ ಹೋಗಿ ತುದಿಯಲ್ಲಿ ನಿಂತು ಆತ್ಮಹತ್ಯೆಗೆ ಮುಂದಾಗಿದ್ದಾಳೆ.
Saving Lives...
Prompt and prudent response by CISF personnel saved life of a girl who jumped from Akshardham Metro Station. #PROTECTIONandSECURITY #Humanity @PMOIndia@HMOIndia@MoHUA_India#15yearsofCISFinDMRC pic.twitter.com/7i9TeZ36Wk— CISF (@CISFHQrs) April 14, 2022
ಈ ವೇಳೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಯೋಧರು ಆಕೆಯನ್ನು ಮನವೊಲಿಸಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಸಾಯಬೇಡ ಎಂದು ಮನವಿ ಮಾಡಿದರೂ ಯುವತಿ ಕೇಳಲಿಲ್ಲ.
ನೋಡನೋಡುತ್ತಲೇ ಕಟ್ಟಡದಿಂದ ಕೆಳಕ್ಕೆ ಜಿಗಿದಿದ್ದಾಳೆ. ಆದರೆ ಅಷ್ಟು ಹೊತ್ತಿಗಾಗಲೇ ಉಪಾಯ ಮಾಡಿದ್ದ ಸಿಐಎಸ್‌ಎಫ್ ಸಿಬ್ಬಂದಿ ದೊಡ್ಡ ಬಟ್ಟೆಯನ್ನು ಹಿಡಿದು ಯುವತಿ ನೆಲಕ್ಕೆ ಬೀಳುವುದನ್ನು ತಡೆದಿದ್ದಾರೆ.
ಕಟ್ಟಡದ ಮೇಲಿಂದ ಬಿದ್ದ ರಭಸಕ್ಕೆ ಯುವತಿ ಬಲಗಾಲಿಗೆ ಗಾಯವಾಗಿದೆಯಾದರೂ ಪ್ರಾಣಾಪಾಯವಾಗಿಲ್ಲ. ಯುವತಿ ಆಘಾತಕ್ಕೆ ಒಳಗಾಗಿರುವುದರಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿಯನ್ನು ರಕ್ಷಿಸುತ್ತಿರುವ ವಿಡಿಯೊ ಒಂದನ್ನು ಹಂಚಿಕೊಂಡಿರುವ ಸಿಐಎಸ್‌ಎಫ್, ತಮ್ಮ ಸಿಬ್ಬಂದಿಯ ವಿವೇಕಯುತ ನಡವಳಿಕೆಯನ್ನು ಕೊಂಡಾಡಿದೆ.