'ಪ್ರಧಾನ ಮಂತ್ರಿ ಸಂಗ್ರಹಾಲಯ' ಉದ್ಘಾಟಿಸಿದ ಪಿಎಂ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದರು. ಸ್ವಾತಂತ್ರ್ಯ ನಂತರ ದೇಶದ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಮೀಸಲಾದ ವಸ್ತು ಸಂಗ್ರಹಾಲಯ ಇದಾಗಿದೆ.

Published: 14th April 2022 02:05 PM  |   Last Updated: 14th April 2022 03:31 PM   |  A+A-


PM Modi inaugurates 'Pradhanmantri Sangrahalaya'

ವಸ್ತು ಸಂಗ್ರಹಾಲಯ ಉದ್ಘಾಟಿಸಿದ ಪಿಎಂ ನರೇಂದ್ರ ಮೋದಿ

ANI

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದರು. ಸ್ವಾತಂತ್ರ್ಯ ನಂತರ ದೇಶದ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಮೀಸಲಾದ ವಸ್ತು ಸಂಗ್ರಹಾಲಯ ಇದಾಗಿದೆ.

ಮ್ಯೂಸಿಯಂಗೆ ಆಗಮಿಸಿದ ಪ್ರಧಾನ ಮಂತ್ರಿ ಮೋದಿ, ಸಂಗ್ರಹಾಲಯಕ್ಕೆ ಒಳಗೆ ಹೋಗುವ ಮುನ್ನ ಟಿಕೆಟ್ ಖರೀದಿಸಿ ಪ್ರವೇಶಿಸಿದರು. ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳು ನೀಡಿರುವ ಕೊಡುಗೆಯನ್ನು ಗೌರವಿಸಲು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ದೇಶದ ಇದುವರೆಗಿನ ಪ್ರಧಾನ ಮಂತ್ರಿಗಳ ಸಿದ್ಧಾಂತ ಮತ್ತು ಅವರ ಅಧಿಕಾರಾವಧಿಯನ್ನು ಬದಿಗೊತ್ತಿ, ಸ್ವಾತಂತ್ರ್ಯದ ನಂತರ ಭಾರತದ ಪ್ರತಿಯೊಬ್ಬ ಪ್ರಧಾನ ಮಂತ್ರಿಗಳಿಗೆ ನೀಡಿದ ಗೌರವ ಇದಾಗಿದೆ ಎಂದು ಪ್ರಧಾನ ಮಂತ್ರಿ ಸಚಿವಾಲಯ ಪ್ರಕಟಣೆ ತಿಳಿಸಿದೆ.

ಸಂಗ್ರಹಾಲಯವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಒಂದು ಅಂತರ್ಗತ ಪ್ರಯತ್ನವಾಗಿದೆ, ಇದು ಎಲ್ಲಾ ಭಾರತದ ಪ್ರಧಾನ ಮಂತ್ರಿಗಳ ನಾಯಕತ್ವ, ದೂರದೃಷ್ಟಿ ಮತ್ತು ಸಾಧನೆಗಳ ಬಗ್ಗೆ ಯುವ ಪೀಳಿಗೆಯನ್ನು ಸಂವೇದನಾಶೀಲಗೊಳಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿದೆ ಎಂದು ಕೂಡ ಹೇಳಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಪ್ರಥಮ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ, ಏಪ್ರಿಲ್ 24ರಂದು ಪ್ರದಾನ

"ಹಳೆಯ ಮತ್ತು ಹೊಸ ಪ್ರಧಾನ ಮಂತ್ರಿಗಳ ವಿಷಯ, ಅವರ ಕೆಲಸಗಳು, ಹಿನ್ನೆಲೆ, ಸಾಧನೆಯನ್ನು ಸಂಗ್ರಹಾಲಯವು ಒಳಗೊಂಡಿದ್ದು, ಬ್ಲಾಕ್ 1ರಲ್ಲಿ ತೀನ್ ಮೂರ್ತಿ ಭವನ್ ಹಾಗೂ ಹೊಸದಾಗಿ ನಿರ್ಮಿಸಿದ ಬ್ಲಾಕ್ 2 ಇರುತ್ತದೆ. ಎರಡೂ ಬ್ಲಾಕ್ ಗಳ ಒಟ್ಟು ವಿಸ್ತೀರ್ಣ 15 ಸಾವಿರದ 600 ಚದರ ಮೀಟರ್ ಆಗಿದೆ ಎಂದು ಪ್ರಧಾನ ಮಂತ್ರಿ ಸಚಿವಾಲಯ ತಿಳಿಸಿದೆ.

ಮ್ಯೂಸಿಯಂ ಕಟ್ಟಡದ ವಿನ್ಯಾಸವು ನವ ಭಾರತದ ಸ್ಪೂರ್ತಿಯ ಕಥೆಯನ್ನು ಹೊಂದಿರುತ್ತದೆ. ಮ್ಯೂಸಿಯಂ ನಿರ್ಮಾಣ ಅವಧಿಯಲ್ಲಿ ಯಾವುದೇ ಮರವನ್ನು ಕಡಿಯಲಾಗಿಲ್ಲ ಅಥವಾ ಕಸಿ ಮಾಡಲಾಗಿಲ್ಲ. ಸಂಗ್ರಹಾಲಯದ ಲಾಂಛನವು ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುವ ಧರ್ಮ ಚಕ್ರವನ್ನು ಹಿಡಿದಿರುವ ಭಾರತದ ಜನರ ಕೈಗಳನ್ನು ಪ್ರತಿನಿಧಿಸುತ್ತದೆ.

ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷಗಳನ್ನು ಆಚರಿಸುತ್ತಿರುವ ಈ ಸಮಯದಲ್ಲಿ ಈ ವಸ್ತು ಸಂಗ್ರಹಾಲಯವು ನಮಗೆ ಉತ್ತಮ ಸ್ಫೂರ್ತಿಯಾಗಿದೆ. ಮಾಜಿ ಪ್ರಧಾನಿಗಳ ಕುಟುಂಬಗಳನ್ನು ಸಹ ನೋಡಬಹುದು. ಅವರ ಉಪಸ್ಥಿತಿಯಿಂದ ಈ ಕಾರ್ಯಕ್ರಮವನ್ನು ಅಲಂಕರಿಸಲಾಗಿದೆ ಎಂದು ಮ್ಯೂಸಿಯಂ ಉದ್ಘಾಟಿಸಿ ಪ್ರಧಾನ ಮಂತ್ರಿ ಹೇಳಿದ್ದಾರೆ. 


Stay up to date on all the latest ದೇಶ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp