ಸಲಿಂಗ ವಿವಾಹಕ್ಕೆ ಉತ್ತರ ಪ್ರದೇಶ ಸರ್ಕಾರ ವಿರೋಧ; ಲೆಸ್ಬಿಯನ್ ಗಳ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ಸಲಿಂಗ ವಿವಾಹ ಪ್ರವೃತ್ತಿಯನ್ನು ವಿರೋಧಿಸಿರುವ ಉತ್ತರ ಪ್ರದೇಶ ಸರ್ಕಾರ, ಇಂತಹ ವಿವಾಹಗಳು ಭಾರತೀಯ ಸಂಸ್ಕೃತಿ ಮತ್ತು ದೇಶದಲ್ಲಿ ಸಹಬಾಳ್ವೆ ನಡೆಸುತ್ತಿರುವ ವಿವಿಧ ಧರ್ಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

Published: 14th April 2022 05:53 PM  |   Last Updated: 14th April 2022 05:53 PM   |  A+A-


Section 377 of the IPC: SC to refer its decision on criminalising gay sex to larger bench

ಸಾಂದರ್ಭಿಕ ಚಿತ್ರ

The New Indian Express

ಲಖನೌ: ಸಲಿಂಗ ವಿವಾಹ ಪ್ರವೃತ್ತಿಯನ್ನು ವಿರೋಧಿಸಿರುವ ಉತ್ತರ ಪ್ರದೇಶ ಸರ್ಕಾರ, ಇಂತಹ ವಿವಾಹಗಳು ಭಾರತೀಯ ಸಂಸ್ಕೃತಿ ಮತ್ತು ದೇಶದಲ್ಲಿ ಸಹಬಾಳ್ವೆ ನಡೆಸುತ್ತಿರುವ ವಿವಿಧ ಧರ್ಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಹಿಂದೂ ವಿವಾಹ ಕಾಯ್ದೆ ಸಲಿಂಗ ವಿವಾಹವನ್ನು ವಿರೋಧಿಸುವುದಿಲ್ಲ. ಹೀಗಾಗಿ ತಮ್ಮ ವಿವಾಹವನ್ನು ಮಾನ್ಯ ಮಾಡಬೇಕು ಎಂದು ಇಬ್ಬರು ಲೆಸ್ಬಿಯನ್ ಮಹಿಳೆಯರು ಮಾಡಿದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

ಇದನ್ನು ಓದಿ: ಭೋಪಾಲಿ ಅಂದ್ರೆ ಸಲಿಂಗಕಾಮಿ: ವಿವೇಕ್ ಅಗ್ನಿಹೋತ್ರಿ ಹೇಳಿಕೆಗೆ ಕಾಂಗ್ರೆಸ್ ಖಂಡನೆ

ಈ ಮಹಿಳೆಯರ ಮನವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು, ವಿವಾಹ ಗಂಡು ಮತ್ತು ಹೆಣ್ಣಿನ ಅಸ್ತಿತ್ವಕ್ಕೆ ಸಂಬಂಧಿಸಿದ ಪರಿಕಲ್ಪನೆಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಕಾನೂನುಗಳ ಅಡಿಯಲ್ಲಿ ಇಂತಹ ವಿವಾಹಗಳು ಅಮಾನ್ಯವೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು, ಸಲಿಂಗ ವಿವಾಹವನ್ನು ಮಾನ್ಯಮಾಡಬೇಕು ಎಂಬ ಮನವಿಯನ್ನು ತಿರಸ್ಕರಿಸಿದ್ದಾರೆ.

ಲೆಸ್ಬಿಯನ್ ಸಂಬಂಧದಲ್ಲಿರುವ ತನ್ನ 23 ವರ್ಷದ ಮಂಗಳನ್ನು ತಮ್ಮ ವಶಕ್ಕೆ ಕೊಡಿಸಬೇಕು ಎಂದು ತಾಯಿ ಅಂಜು ದೇವಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಏಪ್ರಿಲ್ 7ರಂದು ಕೋರ್ಟ್ ಗೆ ಹಾಜರಾದ ಅಂಜು ದೇವಿ ಮಗಳು ಹಾಗೂ 22 ವರ್ಷದ ಯುವತಿ, ತಾವು ಇಬ್ಬರು ಮದುವೆಯಾಗಿದ್ದು, ತಮ್ಮ ಮದುವೆ ಮಾನ್ಯ ಮಾಡಬೇಕು ಎಂದು ಕೋರಿದ್ದರು.


Stay up to date on all the latest ರಾಷ್ಟ್ರೀಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp