ಹಿಂದೂ ಕಾರ್ಯಕರ್ತರು, ಪೊಲೀಸರಿಂದ ದಾಳಿಗೆ ಒಳಗಾಗುವ ಮುಸ್ಲಿಮರ ಪರ ಕಾನೂನು ಹೋರಾಟಕ್ಕೆ ಪಿಎಫ್ಐ ಮುಂದು
ಇತ್ತೀಚಿಗೆ ವಿಶೇಷವಾಗಿ ಭಾರತದಾದ್ಯಂತ ರಾಮನವಮಿ ಹಬ್ಬದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಮುಸ್ಲಿಂ ಸಮುದಾಯದ ಸಂತ್ರಸ್ತರ ಪರವಾಗಿ ಪಾಪ್ಯುಲರ್ ಫ್ರಂಟ್ ಆಫ್...
Published: 15th April 2022 04:23 PM | Last Updated: 15th April 2022 04:34 PM | A+A A-

ಅನೀಸ್ ಅಹ್ಮದ್
ಬೆಂಗಳೂರು: ಇತ್ತೀಚಿಗೆ ವಿಶೇಷವಾಗಿ ಭಾರತದಾದ್ಯಂತ ರಾಮನವಮಿ ಹಬ್ಬದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಮುಸ್ಲಿಂ ಸಮುದಾಯದ ಸಂತ್ರಸ್ತರ ಪರವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಕಾನೂನು ಹೋರಾಟ ನಡೆಸಲಿದೆ.
ಈ ಸಂಬಂಧ ಐಎಎನ್ಎಸ್ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಪಿಎಫ್ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಅವರು, ಎಲ್ಲಾ ರಾಜ್ಯಗಳಲ್ಲಿ ವಿಶೇಷವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಿಎಫ್ಐ ಕಾನೂನು ಘಟಕಗಳು ಈ ನಿಟ್ಟಿನಲ್ಲಿ ಸಂತ್ರಸ್ತರನ್ನು ಸಂಪರ್ಕಿಸುತ್ತಿವೆ ಎಂದಿದ್ದಾರೆ.
ಇದನ್ನು ಓದಿ: ಪಿಎಫ್ಐ ಸಂಘಟನೆ ವಿರುದ್ಧ ಕ್ರಮಕ್ಕೆ ಖಡಕ್ ಸೂಚನೆ: ಗೃಹ ಸಚಿವ ಬೊಮ್ಮಾಯಿ
"ರಾಜಸ್ಥಾನದಲ್ಲಿ ನಮ್ಮ ಕಾನೂನು ಹೋರಾಟ ಪ್ರಾರಂಭವಾಗಿದೆ ಮತ್ತು ಮಧ್ಯ ಪ್ರದೇಶದಲ್ಲಿ ಶೀಘ್ರದಲ್ಲೇ ನಮ್ಮ ಕಾನೂನು ಸಲಹೆಗಾರರು ಸಮುದಾಯದ ಸಂತ್ರಸ್ತರನ್ನು ಭೇಟಿ ಮಾಡುತ್ತಾರೆ. ಒಂದು ಅಥವಾ ಎರಡು ವಾರಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು" ಎಂದು ಅವರು ವಿವರಿಸಿದರು.
ಪಿಎಫ್ಐ ಕಾನೂನು ಘಟಕವು ಕೇರಳದ ಹಾದಿಯಾ ಪ್ರಕರಣ ಮತ್ತು ಉತ್ತರ ಪ್ರದೇಶದ ಮುಜಾಫರ್ನಗರ ಗಲಭೆ ಪ್ರಕರಣಗಳನ್ನು ನಿಭಾಯಿಸಿದೆ ಎಂದು ಅನೀಸ್ ಅಹ್ಮದ್ ಹೇಳಿದ್ದಾರೆ.
"ಎಲ್ಲಾ ರಾಜ್ಯಗಳಲ್ಲಿ, ನಮ್ಮ ಕಾನೂನು ತಂಡಗಳು ಸಂತ್ರಸ್ತರನ್ನು ಸಂಪರ್ಕಿಸುತ್ತವೆ ಮತ್ತು ಅವರಿಗೆ ಕಾನೂನು ನೆರವು ನೀಡುತ್ತವೆ. ಅವರಿಗೆ ಉತ್ತಮ ವಕೀಲರನ್ನು ಗುರುತಿಸುತ್ತಾರೆ ಮತ್ತು ದಾಖಲೆಗಳೊಂದಿಗೆ ಅವರಿಗೆ ಕಾನೂನು ಸಹಾಯ ಮಾಡುತ್ತಾರೆ. ಇದು ಅವರಿಗೆ ನ್ಯಾಯ ಮತ್ತು ಪರಿಹಾರವನ್ನು ಪಡೆಯಲು ಉತ್ತಮ ಅವಕಾಶ" ಎಂದು ಅವರು ಹೇಳಿದ್ದಾರೆ.