ಆಗ್ರಾ: ವೇದಿಕೆಯ ಮೇಲೆ ಕಬ್ಬಿಣದ ಮಾಸ್ಟ್ ಕುಸಿದು ಬಿದ್ದು ಓರ್ವ ಸಾವು, ಕೇಂದ್ರ ಸಚಿವರು ಜಸ್ಟ್ ಬಚಾವ್
ಆಗ್ರಾದಲ್ಲಿ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ದೀಪಗಳನ್ನು ಅಳವಡಿಸಿದ್ದ ಕಬ್ಬಿಣದ ಮಾಸ್ಟ್ ಕುಸಿದು ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ...
Published: 16th April 2022 06:33 PM | Last Updated: 16th April 2022 06:33 PM | A+A A-

ಅರ್ಜುನ್ ರಾಮ್ ಮೇಘವಾಲ್x
ಆಗ್ರಾ: ಆಗ್ರಾದಲ್ಲಿ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ದೀಪಗಳನ್ನು ಅಳವಡಿಸಿದ್ದ ಕಬ್ಬಿಣದ ಮಾಸ್ಟ್ ಕುಸಿದು ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಭೀಮ್ ನಗರಿ ಪ್ರದೇಶದಲ್ಲಿ ಶುಕ್ರವಾರ ಅಂಬೇಡ್ಕರ್ ಜಯಂತಿಯ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಈ ಅವಘಢ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ಮಧುರೈ: ಚಿತ್ತಿರೈ ಬ್ರಹ್ಮೋತ್ಸವಂ ಉತ್ಸವ ವೇಳೆ ಕಾಲ್ತುಳಿತ, ಇಬ್ಬರು ಸಾವು
ರಾತ್ರಿ 9.30ರ ಸುಮಾರಿಗೆ ಜೋರಾಗಿ ಗಾಳಿ ಬೀಸಲಾರಂಭಿಸಿದ್ದರಿಂದ ದೀಪಗಳನ್ನು ಅಳವಡಿಸಿದ್ದ ಕಬ್ಬಿಣದ ಮಾಸ್ಟ್ ಕಾರ್ಯಕ್ರಮದ ವೇಳೆ ವೇದಿಕೆ ಮೇಲೆ ಕುಳಿತಿದ್ದ ಗಣ್ಯರ ಮೇಲೆಯೇ ಬಿದ್ದಿತು. ಈ ವೇಳೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಭಾಷಣ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಸದರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಧರ್ಮೇಂದ್ರ ದಹಿಯಾ ಅವರು ತಿಳಿಸಿದ್ದಾರೆ.
ಮೃತರನ್ನು ಸ್ಥಳೀಯ ನಿವಾಸಿ ರಾಜೇಶ್ ಕುಮಾರ್(50) ಎಂದು ಗುರುತಿಸಲಾಗಿದೆ.