ಪಂಜಾಬ್ ನಲ್ಲಿ ಪಟಾಕಿ ಸ್ಫೋಟ: 14 ವರ್ಷದ ಬಾಲಕ ಸಾವು, ಮತ್ತೊಬ್ಬನಿಗೆ ಗಾಯ
ಪಂಜಾಬ್ ನ ಅಮೃತಸರ ಜಿಲ್ಲೆಯಲ್ಲಿ ಪಟಾಕಿ ತಯಾರಿಸಲು ಯತ್ನಿಸುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 14 ವರ್ಷದ ಬಾಲಕ ಸಾವನ್ನಪ್ಪಿದ್ದು, ಅದೇ ವಯಸ್ಸಿನ ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ...
Published: 18th April 2022 03:18 PM | Last Updated: 18th April 2022 03:18 PM | A+A A-

ಸ್ಪೋಟ (ಸಾಂದರ್ಭಿಕ ಚಿತ್ರ)
ಅಮೃತಸರ: ಪಂಜಾಬ್ ನ ಅಮೃತಸರ ಜಿಲ್ಲೆಯಲ್ಲಿ ಪಟಾಕಿ ತಯಾರಿಸಲು ಯತ್ನಿಸುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 14 ವರ್ಷದ ಬಾಲಕ ಸಾವನ್ನಪ್ಪಿದ್ದು, ಅದೇ ವಯಸ್ಸಿನ ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸ್ಫೋಟದಲ್ಲಿ ಸುಖಜಿತ್ ಸಿಂಗ್ ಸಾವನ್ನಪ್ಪಿದ್ದರೆ, ಆತನ ಸ್ನೇಹಿತ ತರಣ್ಪ್ರೀತ್ ಸಿಂಗ್ಗೆ ಸುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಮದ್ಯಪಾನ ಮಾಡಿ ಗುರುದ್ವಾರ ಪ್ರವೇಶ ಆರೋಪ; ಪಂಜಾಬ್ ಸಿಎಂ ಭಗವಂತ್ ಮಾನ್ ವಿರುದ್ಧ ದೂರು
ಹದಿಹರೆಯದವರ ಗುಂಪೊಂದು ವಾಲಿಬಾಲ್ ಪಂದ್ಯದಲ್ಲಿ ತಮ್ಮ ವಿಜಯವನ್ನು ಆಚರಿಸಲು ಆಟದ ಮೈದಾನದಲ್ಲಿ ಪಟಾಕಿಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಬಾಲಕರಿಗೆ ಪಟಾಕಿ ತಯಾರಿಸಲು ಬಳಸುವ ಸ್ಫೋಟಕ ವಸ್ತುಗಳನ್ನು ನಿಭಾಯಿಸುವುದು ಗೊತ್ತಿಲ್ಲದ ಕಾರಣ ಈ ಸ್ಫೋಟ ಸಂಭವಿಸಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತರಣ್ಪ್ರೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.