ಉತ್ತರ ಪ್ರದೇಶ: ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ಕಿಡಿಗೇಡಿಗಳು - ವಿಡಿಯೋ ವೈರಲ್
ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಮೇಲ್ಜಾತಿಯ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಲ್ಲದೇ ಆತನಿಂದ ಅವರಲ್ಲಿ ಒಬ್ಬನ ಕಾಲು ನೆಕ್ಕಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.
Published: 19th April 2022 11:25 AM | Last Updated: 19th April 2022 05:38 PM | A+A A-

ಸಂಗ್ರಹ ಚಿತ್ರ
ನವದೆಹಲಿ: ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಮೇಲ್ಜಾತಿಯ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಲ್ಲದೇ ಆತನಿಂದ ಅವರಲ್ಲಿ ಒಬ್ಬನ ಕಾಲು ನೆಕ್ಕಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ 2 ನಿಮಿಷ 30 ಸೆಕೆಂಡ್ಗಳ ವೀಡಿಯೊದಲ್ಲಿ ಹುಡುಗನು ತನ್ನ ಕಿವಿಗಳ ಮೇಲೆ ಕೈಯಿರಿಸಿ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ತದನಂತರ ಕಾಲು ನೆಕ್ಕಲು ಹೇಳಿದಾಕ್ಷಣ ಆತ ನಡುಗುತ್ತಲೇ ದುಷ್ಕರ್ಮಿಗಳ ಬಳಿ ಹೋಗಿ ಕಾಲು ನೆಕ್ಕುವುದನ್ನು ನೋಡಬಹುದಾಗಿದೆ.
ಹಲ್ಲೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಘಟನೆ ಏಪ್ರಿಲ್ 10 ರಂದು ನಡೆದಿದ್ದು, ಸಂತ್ರಸ್ತನ ಲಿಖಿತ ದೂರಿನ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕೆಲವು ಆರೋಪಿಗಳು ಮೇಲ್ಜಾತಿಯವರು ಎಂದು ಗುರುತಿಸಲಾಗಿದೆ.