ಡಬ್ಲ್ಯೂಎಚ್ಒ ಮುಖ್ಯಸ್ಥರಿಗೆ 'ತುಳಸಿಭಾಯ್' ಎಂದು ಹೆಸರಿಟ್ಟ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮಹಾನಿರ್ದೇಶಕ ಟೆಡ್ರೊಸ್ ಗೆಬ್ರೆಯೆಸಸ್ ಅವರಿಗೆ ಅವರ ಕೋರಿಕೆಯಂತೆ ಗುಜರಾತಿ ಹೆಸರಿಟ್ಟಿದ್ದಾರೆ.
Published: 20th April 2022 06:42 PM | Last Updated: 20th April 2022 06:49 PM | A+A A-

ಟೆಡ್ರೊಸ್ ಗೆಬ್ರೆಯೆಸಸ್ - ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮಹಾನಿರ್ದೇಶಕ ಟೆಡ್ರೊಸ್ ಗೆಬ್ರೆಯೆಸಸ್ ಅವರಿಗೆ ಅವರ ಕೋರಿಕೆಯಂತೆ ಗುಜರಾತಿ ಹೆಸರಿಟ್ಟಿದ್ದಾರೆ. ಟೆಡ್ರೊಸ್ ಗೆಬ್ರೆಯೆಸಸ್ ಅವರನ್ನು ಅವರ ಕೋರಿಕೆಯ ಮೇರೆಗೆ ತುಳಸಿಭಾಯ್ ಎಂದು ಕರೆಯುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಗಾಂಧಿನಗರದಲ್ಲಿ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು, ಭಾರತೀಯರಾದ ನಾವು ತುಳಸಿ ಗಿಡವನ್ನು ಪೂಜಿಸುತ್ತೇವೆ. ಹೀಗಾಗಿ ನಾನು ನಿಮಗೆ ತುಳಸಿಭಾಯ್ ಎಂದು ಹೆಸರಿಸುತ್ತೇನೆ ಎಂದಿದ್ದಾರೆ.
ಇದನ್ನು ಓದಿ: ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಿಸಲು ‘ಆಯುಷ್ ಮಾರ್ಕ್’, ಆಯುಷ್‌ನಲ್ಲಿ ಹೂಡಿಕೆ ಮತ್ತು ಸಂಶೋಧನೆಗೆ ಪ್ರಧಾನಿ ಮೋದಿ ಕರೆ
ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್-ಜನರಲ್ ಟೆಡ್ರೊಸ್ ನನ್ನ ಒಳ್ಳೆಯ ಸ್ನೇಹಿತ. ಅವರು ಯಾವಾಗಲೂ ನನಗೆ ಭಾರತೀಯ ಶಿಕ್ಷಕರು ಕಲಿಸಿದರು ಮತ್ತು ಅವರಿಂದಲೇ ನಾನು ಇಲ್ಲಿದ್ದೇನೆ ಎಂದು ಹೇಳುತ್ತಿದ್ದರು. ಇಂದು ಅವರು ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಭಾರತೀಯ ಹೆಸರನ್ನು ನಿರ್ಧರಿಸಿದ್ದೀರಾ? ಎಂದು ಕೇಳಿದರು. ಹಾಗಾಗಿ ನಾನು ಅವರಿಗೆ ತುಳಸಿಭಾಯ್ ಎಂದು ಗುಜರಾತಿ ಹೆಸರನ್ನಿಟ್ಟಿದ್ದೇನೆ. ತುಳಸಿ ಎಂಬುದು ಆಧುನಿಕ ತಲೆಮಾರು ಮರೆಯುತ್ತಿರುವ ಸಸ್ಯವಾಗಿದೆ. ಹಿರಿಯ ತಲೆಮಾರುಗಳು ತುಳಸಿಯನ್ನು ಪೂಜಿಸಿದ್ದಾರೆ. ನೀವು ತುಳಸಿ ಗಿಡವನ್ನು ಮದುವೆಯಲ್ಲೂ ಬಳಸಬಹುದು. ಹಾಗಾಗಿ ಈಗ ನೀವು ನಮ್ಮೊಂದಿಗಿದ್ದೀರಿ” ಎಂದು ಪ್ರಧಾನಿ ಹೇಳಿದರು.
ಗುಜರಾತ್‌ನಲ್ಲಿ ಮೂರು ದಿನಗಳ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಹಾಗೂ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಕೂಡ ಉಪಸ್ಥಿತರಿದ್ದರು.
ಸಾಂಪ್ರದಾಯಿಕ ಔಷಧಕ್ಕಾಗಿ ದೇಶಕ್ಕೆ ಬರಲು ಬಯಸುವ ವಿದೇಶಿ ಪ್ರಜೆಗಳಿಗಾಗಿ ಭಾರತವು ಶೀಘ್ರದಲ್ಲೇ ವಿಶೇಷ ಆಯುಷ್ ವೀಸಾ ವರ್ಗವನ್ನು ಪರಿಚಯಿಸಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು.