ವಿಶ್ವ ಭೂ ದಿನ: 'ಭೂಮಿಗೆ ನಮ್ಮ ಕೊಡುಗೆ ನೀಡಿ' ಧ್ಯೇಯವಾಕ್ಯದೊಂದಿಗೆ ಪರಿಸರ ಕಾಳಜಿ ಮೆರೆಯುವ ದಿನ
ಇಂದು ಏಪ್ರಿಲ್ 22, ವಿಶ್ವ ಭೂ ದಿನ.(World Earh day) ಕರ್ನಾಟಕ ಸೇರಿದಂತೆ ದೇಶಾದ್ಯಂತ, ವಿಶ್ವಾದ್ಯಂತ ಹಲವೆಡೆ ವಿಶೇಷ ಕಾರ್ಯಕ್ರಮಗಳು ಆಯೋಜಿತವಾಗಿವೆ. ’ಭೂಮಿಗೆ ನಮ್ಮ ಕೊಡುಗೆ ನೀಡಬೇಕು’ ಎಂಬುದು ಈ ಬಾರಿಯ ಆಚರಣೆಯ ಧ್ಯೇಯವಾಕ್ಯವಾಗಿದೆ.
Published: 22nd April 2022 01:23 PM | Last Updated: 22nd April 2022 01:23 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ/ಬೆಂಗಳೂರು: ಇಂದು ಏಪ್ರಿಲ್ 22, ವಿಶ್ವ ಭೂ ದಿನ.(World Earh day) ಕರ್ನಾಟಕ ಸೇರಿದಂತೆ ದೇಶಾದ್ಯಂತ, ವಿಶ್ವಾದ್ಯಂತ ಹಲವೆಡೆ ವಿಶೇಷ ಕಾರ್ಯಕ್ರಮಗಳು ಆಯೋಜಿತವಾಗಿವೆ. ’ಭೂಮಿಗೆ ನಮ್ಮ ಕೊಡುಗೆ ನೀಡಬೇಕು’ ಎಂಬುದು ಈ ಬಾರಿಯ ಆಚರಣೆಯ ಧ್ಯೇಯವಾಕ್ಯವಾಗಿದೆ.
ಮಹಾತ್ಮ ಗಾಂಧೀಜಿ ಹೇಳಿದಂತೆ, ನಮ್ಮ ಭೂಮಿ ನಮ್ಮ ಬೇಕು ಬೇಡಗಳನ್ನು ಪೂರೈಸುವಷ್ಟು ಶಕ್ತವಾಗಿದ್ದು, ದುರಾಸೆಯನ್ನಲ್ಲ ಎಂಬ ನಂಬಿಕೆಯೊಂದಿಗೆ, ಪರಿಸರ ಸ್ನೇಹಿ ಬದುಕನ್ನು ರೂಢಿಸಿಕೊಳ್ಳುವ ಧ್ಯೇಯದೊಂದಿಗೆ ಭೂಮಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಭೂಮಿಯನ್ನು ಮಾತೃ ಸ್ವರೂಪಿಯಾಗಿ ನೋಡಿಕೊಂಡು ಅದರ ಸಂರಕ್ಷಣೆಗೆ ಎಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಲಾಗಿದೆ. ಹಸಿವನ್ನು ನೀಗಿಸುವ, ನಾಶ ಮಾಡಿದರೂ ಸದಾ ಕಾಲ ಮಾನವರಿಗೆ ಒಳಿತನ್ನೇ ಬಯಸುವುದು ಭೂಮಿ. ಹೀಗಾಗಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವದಾದ್ಯಂತ ಭೂ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಮದರ್ ಅರ್ಥ್ ಡೇ ಎಂದೂ ಕರೆಯಲ್ಪಡುವ ಈ ವಿಶೇಷ ದಿನವು ಅಧಿಕ ಜನಸಂಖ್ಯೆ, ಜೀವವೈವಿಧ್ಯತೆಯ ನಷ್ಟ ಮತ್ತು ಪರಿಸರದ ಗುಣಮಟ್ಟವನ್ನು ಕ್ಷೀಣಿಸುವುದರ ಬಗ್ಗೆ ಹೆಚ್ಚುತ್ತಿರುವ ಕಾಳಜಿಗಳ ಮೇಲೆ ಕೇಂದ್ರೀಕರಿಸುತ್ತದೆ.
ರೇಡಿಯೋ ಮಾಪನ ಕಾಲ ನಿರ್ಣಯ ಪ್ರಕಾರ, ಈ ಭೂಮಿ 4.5 ಬಿಲಿಯನ್ ವರ್ಷಗಳಷ್ಟು ಹಳೆಯದು. ಇಲ್ಲಿಂದ ನಾಲ್ಕು ಬಿಲಿಯನ್ ವರ್ಷಗಳಲ್ಲಿ ಎಲ್ಲಾ ಜೀವಿಗಳು ಈ ಭೂಮಿ ಮೇಲೆ ಕಣ್ಮರೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಮನುಷ್ಯರ, ಪ್ರಾಣಿಗಳ ಸ್ವಚ್ಛ ಮುಕ್ತ ಉಸಿರಾಟಕ್ಕೆ ಇರುವುದೊಂದೇ ಭೂಮಿ. ಇಲ್ಲಿ ಸ್ವಚ್ಛ ಗಾಳಿ, ನೀರು, ಪರಿಸರ ಸಿಕ್ಕಿದರೆ ಮಾತ್ರ ಜೀವಿಗಳು ಬಾಳಿ ಬದುಕಲು ಸಾಧ್ಯ. ಭೂಮಿ ಸೂರ್ಯನ ಸುತ್ತ ಪ್ರತಿ ಗಂಟೆಗೆ 67 ಸಾವಿರ ಮೈಲುಗಳವರೆಗೆ ಸುತ್ತುತ್ತದಂತೆ. ಪ್ರತಿದಿನ ಭೂಮಿಗೆ 60 ಟನ್ ಕಸಗಳು ಆಕಾಶದಿಂದ ಬೀಳುತ್ತವಂತೆ.
ತಾಯಿ ಭೂಮಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ನಮ್ಮ ಗ್ರಹವನ್ನು ಕಾಳಜಿ ವಹಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಗಣ್ಯರು, ಪರಿಸರ ಕಾಳಜಿ ಹೊಂದಿರುವವರು ಇಂದು ವಿಶ್ವ ಭೂ ದಿನ ಅಂಗವಾಗಿ ಶುಭಾಶಯ ತಿಳಿಸಿದ್ದಾರೆ.
#EarthDay is about expressing gratitude to Mother Earth for her kindness and reiterating our commitment to care for our planet. pic.twitter.com/wVeQ6qmLm2
— Narendra Modi (@narendramodi) April 22, 2022