ಸುಂಜ್ವಾನ್ ಎನ್ಕೌಂಟರ್: ಮೂರು ಉಗ್ರರ ಹೊಡೆದುರುಳಿಸಿದ ಸೇನೆ, ಸಿಐಎಸ್ಎಫ್ ಯೋಧ ಹುತಾತ್ಮ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಇನ್ನೆರಡು ದಿನಗಳಿರುವಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು, ಇಂದು ನಡೆದ ಎನ್ ಕೌಂಟರ್ ನಲ್ಲಿ ಸೇನಾಪಡೆಗಳು ಮೂರು ಉಗ್ರರನ್ನು ಹೊಡೆದುರುಳಿಸಿವೆ.
Published: 22nd April 2022 09:57 AM | Last Updated: 22nd April 2022 01:21 PM | A+A A-

ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಇನ್ನೆರಡು ದಿನಗಳಿರುವಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು, ಇಂದು ನಡೆದ ಎನ್ ಕೌಂಟರ್ ನಲ್ಲಿ ಸೇನಾಪಡೆಗಳು ಮೂರು ಉಗ್ರರನ್ನು ಹೊಡೆದುರುಳಿಸಿವೆ.
#BaramullaEncounterUpdate | So far, three terrorists have been killed. Operation going on. Further details shall follow: Kashmir Zone Police https://t.co/iOe0Jy8zlk
— ANI (@ANI) April 21, 2022
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಗೆ ಕ್ಷಣಗಣನೆ; ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿ, ಓರ್ವ ಯೋಧ ಹುತಾತ್ಮ, 4 ಮಂದಿಗೆ ಗಾಯ
ಜಮ್ಮುವಿನ ಸುಂಜ್ವಾನ್ ಪ್ರದೇಶದಲ್ಲಿ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಒಬ್ಬ ಸಿಐಎಸ್ಎಫ್ ಯೋಧ ಹುತಾತ್ಮರಾಗಿದ್ದು, ಇತರೆ 7 ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ಸೇನೆಯ ಪ್ರತಿದಾಳಿಯಲ್ಲಿ ಮೂರು ಉಗ್ರರು ಹತರಾಗಿದ್ದಾರೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಹೇಳಿದ್ದಾರೆ.
#UPDATE | J&K: Till now 2 terrorists have been killed, 2 AK-47 rifles, arms & ammunition, satellite phones & some documents were recovered. It seems like they were 'Fidayeen' attackers. Operation is underway: Mukesh Singh, ADGP, Jammu zone pic.twitter.com/Ggt5G6wTTl
— ANI (@ANI) April 22, 2022
ಬೆಳಗಿನ ಪಾಳಿಯ ಕರ್ತವ್ಯಕ್ಕೆ ತೆರಳುತ್ತಿದ್ದ 15 ಸಿಐಎಸ್ಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಬೆಳಗ್ಗೆ ಸುಮಾರು 4.25 ಗಂಟೆಗೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಪರಿಣಾಮ ಸಿಐಎಸ್ಎಫ್ ಪ್ರತಿದಾಳಿ ನಡೆಸಿತು ಮತ್ತು ಭಯೋತ್ಪಾದಕರನ್ನು ಹಿಮ್ಮೆಟಿಸಲು ಪ್ರಯತ್ನಿಸಿತು.
ಇದನ್ನೂ ಓದಿ: ಬಾರಾಮುಲ್ಲ ಎನ್ಕೌಂಟರ್: ಮೋಸ್ಟ್ ವಾಂಟೆಡ್ ಉಗ್ರ ಕಾಂಟ್ರೂ ಸೇರಿ ಮೃತ ಉಗ್ರರ ಸಂಖ್ಯೆ 4ಕ್ಕೇರಿಕೆ, ಕಾರ್ಯಾಚರಣೆ ಮುಂದುವರಿಕೆ
ಪ್ರತಿದಾಳಿಯಲ್ಲಿ ಇಲ್ಲಿಯವರೆಗೆ ಮೂರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಅಂತೆಯೇ ಘಟನಾ ಪ್ರದೇಶದಿಂದ 2 AK-47 ರೈಫಲ್ಗಳು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ಸ್ಯಾಟೆಲೈಟ್ ಫೋನ್ಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖೇಸ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
J&K | Bus carrying 15 CISF personnel going for morning shift duties attacked by terrorists at about 4.25 hrs near Chaddha Camp in Jammu. CISF averted the terrorist attack, retaliated effectively, and forced the terrorists to run away: CISF officer
— ANI (@ANI) April 22, 2022
ಅಂತೆಯೇ ಉಗ್ರರು ಆತ್ಮಹತ್ಯಾ ದಾಳಿಕೋರರು ಎಂದು ತೋರುತ್ತದೆ. ಪ್ರಸ್ತುತ ಸೇನಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮುಖೇಶ್ ಸಿಂಗ್ ಹೇಳಿದರು.
#WATCH Two Pakistan based Jaish-e-Mohammed (JeM) terrorists planning suicide attacks killed. This is part of a larger conspiracy to disturb peace in Jammu & sabotage the PM's visit to the region: J&K DGP Dilbag Singh pic.twitter.com/v0tXSGfq60
— ANI (@ANI) April 22, 2022