ಈ ಬೇಸಿಗೆ ಗೋವಾದಲ್ಲಿ ಬೋಯಿಂಗ್ ಕಂಪನಿಯ ಎರಡು ಸೂಪರ್ ಹಾರ್ನೆಟ್ ಯುದ್ದ ವಿಮಾನಗಳ ಹಾರಾಟ
ಯುಎಸ್ ಏರೋಸ್ಪೇಸ್ ದೈತ್ಯ ಬೋಯಿಂಗ್ ಕಂಪನಿ ಎರಡು ಸೂಪರ್ ಹಾರ್ನೆಟ್ ಯುದ್ದ ವಿಮಾನಗಳನ್ನು ತನ್ನ ಸಂಭಾವ್ಯ ಖರೀದಿದಾರ ಭಾರತೀಯ ನೌಕಾಪಡೆ ಮುಂದೆ ಕಾರ್ಯಾಚರಣೆ ಪ್ರದರ್ಶನಕ್ಕಾಗಿ ಈ ಬೇಸಿಗೆಯಲ್ಲಿ ಗೋವಾದಲ್ಲಿ ಹಾರಾಟ ನಡೆಸಲು ಯೋಜಿಸಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 23rd April 2022 12:41 AM | Last Updated: 23rd April 2022 01:29 PM | A+A A-

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಯುಎಸ್ ಏರೋಸ್ಪೇಸ್ ದೈತ್ಯ ಬೋಯಿಂಗ್ ಕಂಪನಿ ಎರಡು ಸೂಪರ್ ಹಾರ್ನೆಟ್ ಯುದ್ದ ವಿಮಾನಗಳನ್ನು ತನ್ನ ಸಂಭಾವ್ಯ ಖರೀದಿದಾರ ಭಾರತೀಯ ನೌಕಾಪಡೆ ಮುಂದೆ ಕಾರ್ಯಾಚರಣೆ ಪ್ರದರ್ಶನಕ್ಕಾಗಿ ಈ ಬೇಸಿಗೆಯಲ್ಲಿ ಗೋವಾದಲ್ಲಿ ಹಾರಾಟ ನಡೆಸಲು ಯೋಜಿಸಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಫ್/ ಎ ಸೂಪರ್ ಹಾರ್ನೆಟ್ ಮಾರಾಟ ಕುರಿತಂತೆ ಮಾತನಾಡಿರುವ ಬೋಯಿಂಗ್ ಕಂಪನಿಯ ಭಾರತ ಬ್ಯುಸಿನೆಸ್ ಡೆವಲಪ್ ಮೆಂಟ್ ಉಪಾಧ್ಯಕ್ಷ ಅಲೈನ್ ಗಾರ್ಸಿಯಾ, ಈ ಯುದ್ಧ ವಿಮಾನವನ್ನು ನಿರ್ದಿಷ್ಟವಾಗಿ ವಾಹಕ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆಗಳಿಂದ ಕಾರ್ಯನಿರ್ವಹಿಸಬಹುದು, ಭಾರತೀಯ ನೌಕಪಡೆಯ ಅಗತ್ಯತೆಯನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ.
STOBAR ಎನ್ನುವುದು ವಿಮಾನವಾಹಕ ನೌಕೆಯ ಡೆಕ್‌ನಿಂದ ವಿಮಾನದ ಉಡಾವಣೆ ಮತ್ತು ಪುನವರ್ಶಮಾಡಿಕೊಳ್ಳಲು ಬಳಸುವ ಒಂದು ವ್ಯವಸ್ಥೆಯಾಗಿದೆ. ಇದು 2020 ರಲ್ಲಿ ನಡೆಸಿದ ನಮ್ಮ ಯಶಸ್ವಿ ಸ್ಕೀ-ಜಂಪ್ ಪರೀಕ್ಷೆಗಳು ಮತ್ತು ವ್ಯಾಪಕವಾದ ಸಿಮ್ಯುಲೇಶನ್ ಅಧ್ಯಯನಗಳಿಂದ ಸಾಬೀತಾಗಿದೆ. ಮೇ ಮತ್ತು ಜೂನ್‌ನಲ್ಲಿ ಭಾರತದಲ್ಲಿ ನಡೆಯುವ ಕಾರ್ಯಾಚರಣೆಯ ಪ್ರದರ್ಶನಗಳೊಂದಿಗೆ ನಾವು ಅದನ್ನು ಸಾಬೀತುಪಡಿಸುತ್ತೇವೆ ಎಂದು ಗಾರ್ಸಿಯಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.