ಜಹಾಂಗೀರ್ ಪುರಿ ಗಲಭೆ ಪ್ರಕರಣ: ಆರೋಪಿ ವಿರುದ್ಧ ಪಿಎಂಎಲ್ಎ ಅಡಿ ಕೇಸ್!
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಜಹಂಗೀರ್ ಪುರಿ ಗಲಭೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶಂಕಿತರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ.
Published: 23rd April 2022 01:35 PM | Last Updated: 23rd April 2022 01:37 PM | A+A A-

ಜಹಂಗೀರ್ ಪುರಿ ಗಲಭೆ ದೃಶ್ಯಗಳು (ಸಂಗ್ರಹ ಚಿತ್ರ)
ನವದೆಹಲಿ: ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಜಹಂಗೀರ್ ಪುರಿ ಗಲಭೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶಂಕಿತರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ. ಈ ಪೈಕಿ ಪ್ರಮುಖ ಆರೋಪಿ ಮೊಹಮ್ಮದ್ ಅನ್ಸರ್ ಸಹ ಇದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ ದಾಖಲಿಸಿರುವ ಕೇಸ್ ಇನ್ಫಾರ್ಮೇಷನ್ ವರದಿ ಪೊಲೀಸ್ ಎಫ್ಐಆರ್ ಗೆ ಸಮನಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ಇನ್ಫಾರ್ಮೇಷನ್ ವರದಿ ದಾಖಲಿಸಲಾಗಿದೆ.
ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನ ಇತ್ತೀಚೆಗೆ ಇದೇ ಪ್ರಕರಣವನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ಶಿಫಾರಸು ಮಾಡಿ ಇಲಾಖೆಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಮುಂದಿನ ಆದೇಶದವರೆಗೆ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಿ: ಜಹಾಂಗೀರ್ ಪುರಿ ತೆರವು ಕಾರ್ಯಾಚರಣೆ ಕುರಿತು ಸುಪ್ರೀಂ ಕೋರ್ಟ್ ಆದೇಶ
ಏ.16 ರಂದು ಹನುಮಾನ್ ಜಯಂತಿ ಮೆರವಣಿಗೆ ವೇಳೆ ದೆಹಲಿಯ ಜಹಂಗೀರ್ ಪುರಿಯಲ್ಲಿ ಎರಡು ಕೋಮುಗಳ ನಡುವೆ ಗಲಭೆ ಉಂಟಾಗಿತ್ತು. ಘಟನೆಯಲ್ಲಿ 8 ಮಂದಿ ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರಿಗೆ ಗಾಯಗಳಾಗಿದ್ದವು.
ಗಲಭೆಯಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವುದು, ವಾಹನಗಳನ್ನು ಸುಡುವುದು ವರದಿಯಾಗಿತ್ತು. ಜಹಂಗೀರ್ ಪುರಿಯ ಬಿ ಬ್ಲಾಕ್ ನಲ್ಲಿರುವ ನಿವಾಸಿ ಅನ್ಸರ್ (35) ಗಲಭೆಯ ಪ್ರಮುಖ ಆರೋಪಿಯಾಗಿದ್ದು ಪಿತೂರಿ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.