ಉತ್ತರ ಪ್ರದೇಶ: ಲಿಕ್ಕರ್ ಮಾಫಿಯಾದ ಐವರು ಸದಸ್ಯರು ಪೊಲೀಸರೆದುರು ಶರಣಾಗತಿ; ಯೋಗಿ ನೀತಿಗಳೇ ಸ್ಪೂರ್ತಿ!
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಸ್ಪೂರ್ತಿ ಪಡೆದು ಲಿಕ್ಕರ್ ಮಾಫಿಯಾದ ಐವರು ಸದಸ್ಯರು ಪೊಲೀಸರೆದುರು ಶರಣಾಗಿದ್ದಾರೆ.
Published: 23rd April 2022 06:42 PM | Last Updated: 23rd April 2022 07:27 PM | A+A A-

ಯೋಗಿ ಆದಿತ್ಯನಾಥ್
ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಸ್ಪೂರ್ತಿ ಪಡೆದು ಲಿಕ್ಕರ್ ಮಾಫಿಯಾದ ಐವರು ಸದಸ್ಯರು ಪೊಲೀಸರೆದುರು ಶರಣಾಗಿದ್ದಾರೆ.
ಶರಣಾದ ವ್ಯಕ್ತಿಗಳು ಅಕ್ರಮ ಮದ್ಯ ಉತ್ಪಾದನೆ ಹಾಗೂ ಮಾರಾಟದಲ್ಲಿ ತೊಡಗಿದ್ದರು.
ಖುತಾರ್ ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ "ಅಕ್ರಮ ಮದ್ಯ ತಯಾರಿಸುತ್ತಿದ್ದವರು ಶರಣಾಗುವ ವೇಳೆ ಪೋಸ್ಟರ್ ಗಳನ್ನು ಪ್ರದರ್ಶಿಸಿದ್ದು, " ನಾನು ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದೆ. ಆದರೆ ಸಿಎಂ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಪ್ರಭಾವಿತನಾಗಿ ಈ ಕೆಲಸವನ್ನು ಬಿಡುತ್ತಿದ್ದೇನೆ, ಇನ್ನೆಂದಿಗೂ ಅಕ್ರಮ ಮದ್ಯ ತಯಾರಿಕೆ, ಮಾರಾಟ ಮಾಡುವುದಿಲ್ಲ. ಆದ್ದರಿಂದಲೇ ಈಗ ಪೊಲೀಸರಿಗೆ ಶರಣಾಗುತ್ತಿದ್ದೇವೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಮಾಫಿಯಾ ನಿಗ್ರಹಕ್ಕೆ ಬುಲ್ಡೋಜರ್ ಬಳಸಬೇಕೇ ಹೊರತು ಬಡವರ ಮೇಲಲ್ಲ: ಸಿಎಂ ಯೋಗಿ ಆದಿತ್ಯನಾಥ್
ಈ ಹಿಂದೆಯೂ ಈ ಐವರ ಮೇಲೆ ಪ್ರಕರಣಗಳು ದಾಖಲಾಗಿದ್ದವು ಎಂದು ಎಸ್ ಪಿ ಎಸ್ ಆನಂದ್ ತಿಳಿಸಿದ್ದಾರೆ. ಕಶ್ಮೀರ್ ಸಿಂಗ್, ರೋಷನ್ ಸಿಂಗ್, ದೇಶ್ ರಾಜ್ ಸಿಂಗ್, ಚಮನ್ ಸಿಂಗ್ ಹಾಗೂ ಗುರ್ಮೀತ್ ಶರಣಾಗಿರುವ ಅಪರಾಧಿಗಳಾಗಿದ್ದು, ಇನ್ನೆಂದೂ ಈ ಕೃತ್ಯದಲ್ಲಿ ತೊಡಗುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಅವರನ್ನು ನಂತರ ಬಿಟ್ಟು ಕಳುಹಿಸಲಾಗಿದೆ.