
ಸಾಂದರ್ಭಿಕ ಚಿತ್ರ
ಪ್ರಯಾಗ್ರಾಜ್: ಎರಡು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಮನೆಯಲ್ಲಿಯೇ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದಿದೆ.
ಗರಾಪುರದಿಂದ ಸಿಕಂದ್ರಕ್ಕೆ ಹೋಗುವ ರಸ್ತೆಯ ಬದಿಯಲ್ಲಿನ ಮನೆಯೊಂದರಲ್ಲಿ ಕುಟುಂಬವೊಂದು ವಾಸಿಸುತ್ತಿತ್ತು. ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಡೀ ಕುಟುಂಬವನ್ನೇ ಕೊಂದಿದ್ದಾರೆ.
ನಿರ್ಭೀತ ಹಂತಕರು ಪತಿ, ಪತ್ನಿ, ಮಗಳು, ಸೊಸೆ ಮತ್ತು ಅಮಾಯಕ ಮೊಮ್ಮಗಳ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ
ರಾಮ್ ಕುಮಾರ್ ಯಾದವ್, ಪತ್ನಿ ಕುಸುಮ್ ದೇವಿ ಮಗಳು ಮನಿಶಾ ಮತ್ತು ಸೊಸೆ ಸವಿತಾ ಹಾಗೂ ಮೀನಾಕ್ಷಿ ಮೃತರು. ಅಪರಾಧದ ಸಮಯದಲ್ಲಿ ಯಾದವ್ ಅವರ ಮಗ ಸುನೀಲ್ ಘಟನೆ ನಡೆದಾಗ ಮನೆಯಲ್ಲಿರಲಿಲ್ಲ. ಹತ್ಯೆಯ ನಂತರ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ್ದಾರೆ.
ಈ ವೇಳೆ ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ದಾರಿಹೋಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಎಲ್ಲರೂ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ.