ನಿತೀಶ್ ಮಹಾ ಮೈತ್ರಿ ಸೇರುತ್ತಾರೆ: ಚಿರಾಗ್ ಪಾಸ್ವಾನ್ ಸುಳಿವು
ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಬಿಹಾರ ಸಿಎಂ ನಿತೀಶ್ ಕುಮಾರ್ ಆರ್ ಜೆಡಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಕುಮಾರ್ ಮಹಾ ಮೈತ್ರಿಕೂಟ ಸೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
Published: 24th April 2022 06:46 PM | Last Updated: 24th April 2022 06:46 PM | A+A A-

ನಿತೀಶ್ ಕುಮಾರ್
ಪಾಟ್ನಾ: ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಬಿಹಾರ ಸಿಎಂ ನಿತೀಶ್ ಕುಮಾರ್ ಆರ್ ಜೆಡಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಕುಮಾರ್ ಮಹಾ ಮೈತ್ರಿಕೂಟ ಸೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಪಕ್ಷದ ಬಣವೊಂದನ್ನು ಮುನ್ನಡೆಸುತ್ತಿರುವ ಪಾಸ್ವಾನ್, ನಿತೀಶ್ ಕುಮಾರ್ ತಮ್ಮ ಅಧಿಕೃತ ನಿವಾಸವನ್ನು ಬಿಟ್ಟು ನವೀಕರಣದ ಉದ್ದೇಶಕ್ಕಾಗಿ ಬೇರೆ ಮನೆಗೆ ಸ್ಥಳಾಂತರಗೊಂಡಿರುವುದು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.
ನಾವೆಲ್ಲರೂ ನಮ್ಮ ಅಧಿಕೃತ ನಿವಾಸಗಳನ್ನು ನವೀಕರಿಸಿಕೊಳ್ಳುತ್ತೇವೆ. ಆದರೆ ಹಸುಗಳೂ ಸೇರಿದಂತೆ ತಮ್ಮದೆಲ್ಲವನ್ನೂ ಬಿಟ್ಟು ಹೊರನಡೆಯುವುದನ್ನು ಯಾರಾದರೂ ಕಂಡಿದ್ದೀರಾ? ಎಂದು ಪಾಸ್ವಾನ್ ಕೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಸ್ವಾನ್ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಇತ್ತೀಚೆಗೆ ತೇಜಸ್ವಿ ಯಾದವ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸುವ ಮೂಲಕ ಬಿಹಾರ ಸಿಎಂ ನಿತೀಶ್ ಕುಮಾರ್ ಅಚ್ಚರಿ ಮೂಡಿಸಿದ್ದರು.