ಪ್ರಧಾನಿ ನಿವಾಸದ ಎದುರು ನಮಾಜ್, ಹನುಮಾನ್ ಚಾಲಿಸ ಪಠಿಸಲು ಅನುಮತಿ ಕೇಳಿದ ಎನ್ ಸಿಪಿ ಕಾರ್ಯಾಧ್ಯಕ್ಷೆ
ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲಿಸ ಪ್ರಹಸನ ನಡೆಯುತ್ತಿದ್ದು, ಎನ್ ಸಿಪಿಯ ಕಾರ್ಯಾಧ್ಯಕ್ಷೆ ಫಮಿದಾ ಹಸನ್ ಖಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು...
Published: 25th April 2022 03:59 PM | Last Updated: 25th April 2022 04:49 PM | A+A A-

ಎನ್ ಸಿಪಿಯ ಕಾರ್ಯಾಧ್ಯಕ್ಷೆ ಫಮಿದಾ ಹಸನ್ ಖಾನ್
ನವದೆಹಲಿ: ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲಿಸ ಪ್ರಹಸನ ನಡೆಯುತ್ತಿದ್ದು, ಎನ್ ಸಿಪಿಯ ಕಾರ್ಯಾಧ್ಯಕ್ಷೆ ಫಮಿದಾ ಹಸನ್ ಖಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಎಲ್ಲಾ ಧರ್ಮಗಳ ಪ್ರಾರ್ಥನೆಯನ್ನೂ ಸಲ್ಲಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಎದುರು ಹನುಮಾನ್ ಚಾಲಿಸಾ, ನವ್ಕರ್ ಮಂತ್ರ, ಗುರು ಗ್ರಂಥ್, ನಮಾಜ್ ಪಠಿಸಬೇಕೆಂದಿದ್ದೇನೆ ದಯಮಾಡಿ ಇದಕ್ಕಾಗಿ ಸಮಯ ಮತ್ತು ದಿನಾಂಕವನ್ನು ತಿಳಿಸಿ" ಎಂದು ಖಾನ್ ಏ.23 ರಂದು ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿ ಮೇಲೆ ದೇಶದ್ರೋಹ ಪ್ರಕರಣ ದಾಖಲು
ಅಮರವಾತಿ ಲೋಕಸಭಾ ಸಂಸದೆ ನವನೀತ್ ರಾಣಾ, ಹಾಗೂ ಆಕೆಯ ಪತಿ, ಶಾಸಕ ರವಿ ರಾಣ, ಮಹಾರಾಷ್ಟ್ರದ ಮುಂಬೈ ನಲ್ಲಿರುವ ಸಿಎಂ ಠಾಕ್ರೆ ಅವರ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲಿಸಾ ಪಠಣ ಮಾಡುವುದಾಗಿ ಸವಾಲು ಹಾಕಿದ್ದರು. ರಾಣಾ ದಂಪತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬೆನ್ನಲ್ಲೇ ಪ್ರಧಾನಿ ನಿವಾಸದ ಎದುರು ನಮಾಜ್, ಹನುಮಾನ್ ಚಾಲಿಸ ಪಠಿಸಲು ಎನ್ ಸಿಪಿ ಕಾರ್ಯಾಧ್ಯಕ್ಷ್ಯೆ ಅನುಮತಿ ಕೇಳಿದ್ದಾರೆ.
ದೇಶದಲ್ಲಿ ಹಣದುಬ್ಬರ, ನಿರುದ್ಯೊಗ ಸೆರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಂಸದೆ ರಾಣ ಹಾಗೂ ಶಾಸಕರು ಮಾತನಾಡಬೇಕಿತ್ತು. ಆದರೆ ದೇಶದ ಪ್ರಗತಿಗೆ ಧಾರ್ಮಿಕ ಅಜೆಂಡಾ ಸಹಕಾರಿಯಾಗುವುದಾದರೆ, ಹಣದುಬ್ಬರ ಕಡಿಮೆ ಮಾಡಲು ಸಾಧ್ಯವಾದರೆ, ನಿರುದ್ಯೋಗ ಕಡಿಮೆಯಾಗುವುದಾದರೆ, ಇಂತಹ ಚಟುವಟಿಕೆಗಳಲ್ಲಿ ತಾವೂ ಭಾಗಿಯಾಗುವುದಾಗಿ ಎನ್ ಸಿಪಿ ನಾಯಕಿ ಹೇಳಿದ್ದಾರೆ.