ತಾಳೆ ಎಣ್ಣೆ ರಫ್ತು ನಿಷೇಧಿಸಿದ ಇಂಡೊನೇಷ್ಯಾ, ಶೀಘ್ರವೇ ಅಡುಗೆ ಎಣ್ಣೆ ಮತ್ತಷ್ಟು ದುಬಾರಿ ಸಾಧ್ಯತೆ
ಶೀಘ್ರದಲ್ಲೇ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಅಡುಗೆ ಎಣ್ಣೆ ಗಗನಮುಖಿಯಾಗಿದೆ. ಈಗ ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತು ನಿಷೇಧಿಸುವುದಾಗಿ...
Published: 26th April 2022 08:18 PM | Last Updated: 26th April 2022 08:18 PM | A+A A-

ಸಾಂದರ್ಭಿಕ ಚಿತ್ರ
ಜಕಾರ್ತಾ: ಶೀಘ್ರದಲ್ಲೇ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಅಡುಗೆ ಎಣ್ಣೆ ಗಗನಮುಖಿಯಾಗಿದೆ. ಈಗ ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತು ನಿಷೇಧಿಸುವುದಾಗಿ ಘೋಷಿಸಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವ ಸಾಧ್ಯತೆ ಇದೆ.
ವಿಶ್ವದ ಅತಿದೊಡ್ಡ ಅಡುಗೆ ಎಣ್ಣೆ ರಫ್ತುದಾರ ರಾಷ್ಟ್ರವಾದ ಇಂಡೋನೇಷ್ಯಾ ಏಪ್ರಿಲ್ 28 ರಿಂದ ತಾಳೆ ಎಣ್ಣೆ ರಫ್ತನ್ನು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ದೇಶೀಯ ಕೊರತೆಯ ಹೆಚ್ಚಳದ ಕಾರಣದಿಂದ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತನ್ನು ನಿಲ್ಲಿಸಲಿದೆ.
ಇದನ್ನು ಓದಿ: ಉಕ್ರೇನ್ ವಿರುದ್ಧ ಯುದ್ಧ ಹಿನ್ನೆಲೆ, ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ನಾಲ್ಕು ಪಟ್ಟು ಹೆಚ್ಚಳ!
ವಿಶ್ವದಲ್ಲೇ ಅತೆಹೆಚ್ಚು ತಾಳೆ ಎಣ್ಣೆ ರಫ್ತು ಮಾಡುವ ಇಂಡೋನೇಷ್ಯಾ ಪ್ರಥಮ ಸ್ಥಾನದಲ್ಲಿದೆ. ನಂತರ ಮಲೇಷ್ಯಾ ಎರಡನೇ ಸ್ಥಾನದಲ್ಲಿದೆ. ಭಾರತವು ಇಂಡೋನೇಷ್ಯಾದಿಂದ ಅತಿ ಹೆಚ್ಚು ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುವ ದೇಶವಾಗಿದೆ. ಹೀಗಾಗಿ ತಾಳೆ ಎಣ್ಣೆ ರಫ್ತು ಸ್ಥಗಿತದಿಂದ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಭಾರತವಷ್ಟೇ ಅಲ್ಲದೇ ಚೀನಾ ಕೂಡ ಇಂಡೋನೇಷ್ಯಾದಿಂದ ತಾಳೆ ಎಣ್ಣೆಯನ್ನ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.