ಮಂದಿರ, ಮಸೀದಿಗಳ ಮೇಲಿನ ಧ್ವನಿವರ್ಧಕ ತೆಗೆದು ಸಾಮರಸ್ಯಕ್ಕೆ ಮಾದರಿಯಾದ ಝಾನ್ಸಿ!

ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಎಲ್ಲಾ 1,565 ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ, ಝಾನ್ಸಿಯಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು...

Published: 26th April 2022 11:38 PM  |   Last Updated: 26th April 2022 11:38 PM   |  A+A-


Yogi Adityanath

ಯೋಗಿ ಆದಿತ್ಯನಾಥ್

The New Indian Express

ಲಖನೌ: ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಎಲ್ಲಾ 1,565 ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ, ಝಾನ್ಸಿಯಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

ಝಾನ್ಸಿಯ ಗಾಂಧಿ ಚೌಕ್‌ನಲ್ಲಿರುವ ರಾಮ-ಜಾನಕಿ ದೇವಸ್ಥಾನ ಮತ್ತು ಸುನ್ನಿ ಜಾಮಾ ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸಿದ್ದು, ಸಮುದಾಯಗಳ ನಡುವಿನ ವೈಷಮ್ಯ ಕಡಿಮೆ ಮಾಡಲು ಮುಂದಾಗಿವೆ. ಈ ಮೂಲಕ ರಾಮ-ಜಾನಕಿ ದೇವಸ್ಥಾನ ಮತ್ತು ಸುನ್ನಿ ಜಾಮಾ ಮಸೀದಿ ಕೋಮುಸೌಹಾರ್ದತೆಯ ಸಂದೇಶ ಸಾರುವಲ್ಲಿ ನಿರತವಾಗಿರುವ ಎರಡು ಧಾರ್ಮಿಕ ಸಂಸ್ಥೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ಇದನ್ನು ಓದಿ: ಆಸ್ತಿ ವಿವರ ಬಹಿರಂಗಪಡಿಸುವಂತೆ ಯುಪಿ ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ

ದೇವಾಲಯ ಮತ್ತು ಮಸೀದಿ ಎರಡೂ ಗಾಂಧಿ ಚೌಕ್ ಪ್ರದೇಶದಲ್ಲಿ ಪರಸ್ಪರ ಕೆಲವೇ ಮೀಟರ್‌ಗಳ ಅಂತರದಲ್ಲಿವೆ. ಇಲ್ಲಿಯವರೆಗೆ, ದೇವಸ್ಥಾನದಿಂದ ಬೆಳಗ್ಗೆ ಮತ್ತು ಸಂಜೆ ಆರತಿಯನ್ನು ಪ್ರಸಾರ ಮಾಡಲಾಗುತ್ತಿತ್ತು ಮತ್ತು ಮಸೀದಿಯಿಂದ ಐದು ಬಾರಿ ಆಜಾನ್ ಮಾಡಲಾಗುತ್ತಿತ್ತು.

ಜನರ ನಡುವೆ ಪ್ರೀತಿ ಮತ್ತು ಸೌಹಾರ್ದತೆಯ ಬಲವಾದ ಸಂದೇಶವನ್ನು ರವಾನಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಅರ್ಚಕ ಶಾಂತಿ ಮೋಹನ್ ದಾಸ್ ಮತ್ತು ಸುನ್ನಿ ಜಾಮಾ ಮಸೀದಿಯ ಹಫೀಜ್ ತಾಜ್ ಆಲಂ ಅವರು ಹೇಳಿದ್ದಾರೆ.

"ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಸಂಜೆ ಆರತಿ ಎಂದಿನಂತೆ ನಡೆಯುತ್ತಿದೆ ಮತ್ತು ಭಜನೆಗಳನ್ನು ಸಹ ಮಾಡಲಾಗುತ್ತಿದೆ. ಆದರೆ ಧ್ವನಿವರ್ಧಕಗಳನ್ನು ಬಳಸುತ್ತಿಲ್ಲ" ಎಂದು ಅರ್ಚಕರು ತಿಳಿಸಿದ್ದಾರೆ.

"ನಾವು ಮಸೀದಿಯೊಳಗೆ ಸಣ್ಣ ಸ್ಪೀಕರ್‌ಗಳನ್ನು ಹೊಂದಿದ್ದೇವೆ ಮತ್ತು ಆಜಾನ್ ಶಬ್ದವು ಆವರಣದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತೇವೆ. ಏಕೆಂದರೆ ಧ್ವನಿವರ್ಧಕಗಳು ಯುಗಗಳ ನಮ್ಮ ಸಹೋದರತ್ವವನ್ನು ಹಾಳುಮಾಡಲು ನಾವು ಅನುಮತಿ ನೀಡುವುದಿಲ್ಲ" ಎಂದು ಇಮಾಮ್ ಅವರು ಹೇಳಿದ್ದಾರೆ.


Stay up to date on all the latest ದೇಶ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp