ಉದ್ಧವ್ ಠಾಕ್ರೆ ಮತ್ತು ಬಿಜೆಪಿ ನಡುವೆ 'ದಾದಾಗಿರಿ' ವಾರ್: ಶಿವಸೇನೆ 'ದರೋಡೆಕೋರರ ಗ್ಯಾಂಗ್' ಎಂದು ಸಿ.ಟಿ.ರವಿ ಟಾಂಗ್!
ಮಹಾರಾಷ್ಟ್ರ ಬಿಜೆಪಿಯ ಉಸ್ತುವಾರಿ ಸಿಟಿ ರವಿ ಅವರು ಉದ್ಧವ್ ಠಾಕ್ರೆ ಅವರ ಹೇಳಿಕೆಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿ ಶಿವಸೇನೆಗೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
Published: 27th April 2022 08:55 AM | Last Updated: 27th April 2022 01:22 PM | A+A A-

ಸಿ.ಟಿ ರವಿ
ಮುಂಬೈ: ಹನುಮಾನ್ ಚಾಲೀಸ ಪಠಿಸುವ ವಿವಾದಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಮತ್ತು ಶಾಸಕ ರವಿ ರಾಣಾ ಬಂಧನದ ನಂತರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ “ದಾದಾಗಿರಿ” ಕುರಿತು ಎಚ್ಚರಿಕೆ ನೀಡಿದರು. ಈ ಬಗ್ಗೆ ಬಿಜೆಪಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಹನುಮಾನ್ ಚಾಲೀಸಾವನ್ನು ಪಠಿಸುವವರು “ದಾದಾಗಿರಿ” ಮಾಡುತ್ತಾರಾ ಎಂದು ಕೇಳಿದೆ.
ಮಹಾರಾಷ್ಟ್ರ ಬಿಜೆಪಿಯ ಉಸ್ತುವಾರಿ ಸಿಟಿ ರವಿ ಅವರು ಉದ್ಧವ್ ಠಾಕ್ರೆ ಅವರ ಹೇಳಿಕೆಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿ ಶಿವಸೇನೆಗೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
ಸಂಸದ ನವನೀತ್ ರಾಣಾ ಬಂದಿದ್ದು ಹನುಮಾನ್ ಚಾಲೀಸಾ ಪಠಿಸಲು ಹೊರತು ದಾದಾಗಿರಿ (ಗೂಂಡಾಗಿರಿ) ಮಾಡಲು ಅಲ್ಲ. ಅವರ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಿದ್ದಾರೆ. ಗಂಭೀರ ಆರೋಪ ಎದುರಿಸುತ್ತಿರುವ ನವಾಬ್ ಮಲಿಕ್ ನಿಜವಾಗಿಯೂ ಸಚಿವ ಸಂಪುಟದಲ್ಲಿರುವ ದೇಶದ್ರೋಹಿ. ಅವರ ವಿರುದ್ಧದ ಆರೋಪಗಳನ್ನು ಉದ್ಧವ್ ಠಾಕ್ರೆ ಪರಿಗಣಿಸಿದ್ದರೆ ನವಾಬ್ ಮಲಿಕ್ ಸಂಪುಟದಲ್ಲಿ ಇರುತ್ತಿರಲಿಲ್ಲ” ಎಂದು ಸಿ.ಟಿ. ರವಿ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ರಾಣಾ ದಂಪತಿ ಬಂಧನ ಪ್ರಕರಣ: ಮಹಾರಾಷ್ಟ್ರ ಸರ್ಕಾರಕ್ಕೆ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ!
ಬಾಳ್ ಠಾಕ್ರೆಯವರ ಶಿವಸೇನೆ ಮತ್ತು ಉದ್ಧವ್ ಠಾಕ್ರೆಯವರ ಶಿವಸೇನೆಯನ್ನು “ದರೋಡೆಕೋರರ ಗ್ಯಾಂಗ್” ಎಂದು ಕರೆದ ಸಿ.ಟಿ. ಅವರ ನಡುವೆ ಹೋಲಿಕೆ ಮಾಡಿದರು. ಬಾಳ್ ಠಾಕ್ರೆ ಕಾಲದಲ್ಲಿ ಇದ್ದ ಶಿವಸೇನೆ ಇವತ್ತಿನ ಶಿವಸೇನೆ ಅಲ್ಲ. ಇಂದಿನ ಶಿವಸೇನೆ ಅವಕಾಶವಾದಿ. ದರೋಡೆಕೋರರ ಗ್ಯಾಂಗನ್ನು ಮುನ್ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದಿನೇ ದಿನೇ ನಮಗೆ ಹೊಸ ಹೊಸ ಹಗರಣ ಗೊತ್ತಾಗುತ್ತಿದೆ. ಮುಂದೊಂದು ದಿನ ಜನ ಸಾಮಾನ್ಯರು ಅದನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಅವರು ಎಂವಿಎ (ಮಹಾ ವಿಕಾಸ್ ಅಘಾಡಿ) ಸರ್ಕಾರದ ದೌರ್ಜನ್ಯವನ್ನು ದೀರ್ಘಕಾಲ ಸಹಿಸಿಕೊಳ್ಳುವುದಿಲ್ಲ ಎಂದರು.
ಝಡ್-ಪ್ಲಸ್ ಕೆಟಗರಿ ಭದ್ರತೆಯ ಹೊರತಾಗಿಯೂ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹಗರಣಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಕಿರಿತ್ ಸೋಮಯ್ಯ ಅವರ ಮೇಲೆ ದಾಳಿ ಮಾಡಲಾಗಿದೆ ಎಂದು ಸಿ.ಟಿ ರವಿ ಅವರು ಆರೋಪಿಸಿದರು.
ಶನಿವಾರ, ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ದಂಪತಿಗಳು ಮುಖ್ಯಮಂತ್ರಿಯ ಮನೆಯ ಹೊರಗೆ ಹನುಮಾನ್ ಚಾಲೀಸಾ ಪಠಿಸಲು ಯೋಜಿಸಿದ್ದಾರೆಂದು ದೊಡ್ಡ ಗಲಾಟೆ ನಡೀತು. ಭಾನುವಾರ ರಾಣಾ ದಂಪತಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.