ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್: ಭಾರತೀಯ ಛಾಯಾಗ್ರಾಹಕನಿಗೆ ಒಲಿದ ಪ್ರಶಸ್ತಿ
ಕಾಶ್ಮೀರದ ಶ್ರೀನಗರದಲ್ಲಿರುವ ಬೀದಿ ವ್ಯಾಪಾರಿಯ ಚಿತ್ರಕ್ಕಾಗಿ ಭಾರತೀಯ ಛಾಯಾಗ್ರಾಹಕ ದೇಬ್ದತ್ತಾ ಚಕ್ರವರ್ತಿ ಅವರು 2022ರ ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಪ್ರಶಸ್ತಿ ವಿಜೇತರಾಗಿದ್ದಾರೆ.
Published: 27th April 2022 09:20 PM | Last Updated: 28th April 2022 02:01 PM | A+A A-

ಪ್ರಶಸ್ತಿಗೆ ಆಯ್ಕೆಯಾದ ಫೋಟೋ
ನವದೆಹಲಿ: ಕಾಶ್ಮೀರದ ಶ್ರೀನಗರದಲ್ಲಿರುವ ಬೀದಿ ವ್ಯಾಪಾರಿಯ ಚಿತ್ರಕ್ಕಾಗಿ ಭಾರತೀಯ ಛಾಯಾಗ್ರಾಹಕ ದೇಬ್ದತ್ತಾ ಚಕ್ರವರ್ತಿ ಅವರು 2022ರ ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಪ್ರಶಸ್ತಿ ವಿಜೇತರಾಗಿದ್ದಾರೆ.
ಕೆಬಾಬಿಯಾನಾ ಎಂಬ ಶೀರ್ಷಿಕೆಯ ಚಿತ್ರದಲ್ಲಿ, ಮಾರಾಟಗಾರನು ಹೊಗೆ ತುಂಬಿದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದು, ಮಾಂಸದ ಕಬಾಬ್‌ಗಳಂತೆಯೇ ಕಾಣುವಂತೆ ಅವನು ಹೊಗೆಯಿಂದ ಆವರಿಸಲ್ಪಟ್ಟಿದ್ದಾನೆ.
ಈ ಫೋಟೋವನ್ನು ಶ್ರೀನಗರದ ಖಯ್ಯಾಮ್ ಚೌಕ್‌ನಲ್ಲಿ ಚಿತ್ರೀಕರಿಸಲಾಗಿದೆ. ಇದು ಹಗಲಿನಲ್ಲಿ ರಸ್ತೆಯಂತೆ ಕಾಣುವ ಗಲ್ಲಿ ಮಾರ್ಗವಾಗಿದೆ. ಆದಾಗ್ಯೂ, ಸಂಜೆಯ ಸಮಯದಲ್ಲಿ ಮಾರಾಟಗಾರರು ಅನೇಕ ಇದ್ದಿಲು ಒಲೆಗಳನ್ನು ಬೆಳಗಿಸುವುದರಿಂದ ಇದು ಚಟುವಟಿಕೆಯ ಕೇಂದ್ರವಾಗಿ ಬದಲಾಗುತ್ತದೆ ಮತ್ತು ಗ್ರಿಲ್‌ಗಳಿಂದ ಕಬಾಬ್‌ಗಳ ಸುವಾಸನೆ ಮತ್ತು ಹೊಗೆ ಈ ಬೀದಿಯನ್ನು ಆಹಾರಪ್ರಿಯರ ಸ್ವರ್ಗವಾಗಿ ಪರಿವರ್ತಿಸುತ್ತದೆ
ಪ್ರಪಂಚದಾದ್ಯಂತದ ಸಾವಿರಾರು ಜನ ಈ ವರ್ಷದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ದೇಬ್ದತ್ತಾ ಚಕ್ರವರ್ತಿ ಪ್ರಶಸ್ತಿ ಪಡೆದಿದ್ದಾರೆ.
ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಸ್ಪರ್ಧೆಯನ್ನು 2011 ರಲ್ಲಿ ಸ್ಥಾಪಿಸಲಾಯಿತು. ಪ್ರಪಂಚದಾದ್ಯಂತದ ಅತ್ಯುತ್ತಮ ಆಹಾರ ಛಾಯಾಗ್ರಹಣ ಮತ್ತು ವೀಡಿಯೊಗಳಿಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ.