ದೆಹಲಿಯಲ್ಲಿ 1,367 ಹೊಸ ಕೋವಿಡ್ ಪ್ರಕರಣ, ಪಾಸಿಟಿವ್ ಪ್ರಮಾಣ ಶೇ.4.50ಕ್ಕೆ ಏರಿಕೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ 1,367 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಯ ಸಂಖ್ಯೆ(1,204)ಗಿಂತ ಶೇಕಡಾ 13 ರಷ್ಟು ಹೆಚ್ಚಾಗಿದೆ ಮತ್ತು ಒಂದು ಸಾವಿನ ವರದಿಯಾಗಿದೆ.
Published: 28th April 2022 12:50 AM | Last Updated: 28th April 2022 02:02 PM | A+A A-

ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ 1,367 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಯ ಸಂಖ್ಯೆ(1,204)ಗಿಂತ ಶೇಕಡಾ 13 ರಷ್ಟು ಹೆಚ್ಚಾಗಿದೆ ಮತ್ತು ಒಂದು ಸಾವಿನ ವರದಿಯಾಗಿದೆ.
ದೆಹಲಿ ಆರೋಗ್ಯ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಜಧಾನಿಯಲ್ಲಿ ಸತತ ಆರನೇ ದಿನ 1,000ಕ್ಕೂ ಹೆಚ್ಚು ಹೊಸ ದೈನಂದಿನ ಪ್ರಕರಣಗಳು ವರದಿಯಾಗಿದ್ದು, ಕೋವಿಡ್ ಪಾಸಿಟಿವಿಟಿ ದರ ಶೇಕಡಾ 4.50 ರಷ್ಟಿದೆ.
ಇದನ್ನು ಓದಿ: ಕೊರೋನಾ 4ನೇ ಅಲೆ ಆತಂಕ: ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ, '3ಟಿ' ಸೂತ್ರ ಪಾಲನೆಗೆ ಸೂಚನೆ
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗಿನ ವರ್ಚುವಲ್ ಸಭೆಯಲ್ಲಿ ದೇಶದಲ್ಲಿ ಹಿಂದಿನ ಕೋವಿಡ್ ಅಲೆಗಳ ಸಮಯದಲ್ಲಿ ಮಾಡಿದ ರೀತಿ ‘ಪರೀಕ್ಷೆ, ಟ್ರ್ಯಾಕ್ ಮತ್ತು ಚಿಕಿತ್ಸೆ ಅನುಷ್ಠಾನಕ್ಕೆ ಒತ್ತು ನೀಡಿದರು.
ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 18,78,458 ಆಗಿದ್ದು, ಸಾವಿನ ಸಂಖ್ಯೆ 26,170 ಕ್ಕೆ ತಲುಪಿದೆ.