ರಾಜಸ್ಥಾನ ಬಳಿಕ ಛತ್ತೀಸ್‌ಗಢ ಕಾಂಗ್ರೆಸ್‌ನಲ್ಲೂ ಬಿಕ್ಕಟ್ಟು, ಮುಖ್ಯಮಂತ್ರಿ ಬದಲಾವಣೆಗೆ ಪಟ್ಟು
ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕೇಳಿಕೊಂಡಿದ್ದು, ಇದೀಗ ಛತ್ತೀಸ್‌ಗಢದಲ್ಲೂ ಮುಖ್ಯಮಂತ್ರಿ...
Published: 28th April 2022 09:45 PM | Last Updated: 29th April 2022 01:08 PM | A+A A-

ಟಿಎಸ್ ಸಿಂಗ್ ಡಿಯೋ - ಭೂಪೇಶ್ ಬಘೇಲ್
ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕೇಳಿಕೊಂಡಿದ್ದು, ಇದೀಗ ಛತ್ತೀಸ್‌ಗಢದಲ್ಲೂ ಮುಖ್ಯಮಂತ್ರಿ ಬದಲಾವಣೆಗೆ ಆಗ್ರಹ ಕೇಳಿ ಬರುತ್ತಿದೆ.
ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢದಲ್ಲಿ ರಾಜ್ಯ ಕ್ಯಾಬಿನೆಟ್ ಸಚಿವ ಟಿಎಸ್ ಸಿಂಗ್ ಡಿಯೋ ಅವರು ತಮ್ಮನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು. ಈ ಬಗ್ಗೆ ತ್ವರಿತ ನಿರ್ಧಾರ ತೆಗೆದುಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ. ಇಲ್ಲದಿದ್ದರೆ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
2018 ರಲ್ಲಿ ಹೈಕಮಾಂಡ್ ತನಗೆ ನೀಡಿದ ಭರವಸೆಯಂತೆ ಸಿಎಂ ಮಾಡಬಹುದು ಎಂದು ಕಾಯುತ್ತಿರುವ ಡಿಯೋ ಅವರಿಗೆ 2021ರ ಆಗಸ್ಟ್ ನಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಬದಲಾಯಿಸುವ ಭರವಸೆ ನೀಡಲಾಗಿತ್ತು.
ಇದನ್ನು ಓದಿ: ಶೀಘ್ರವೇ ನನ್ನನ್ನು ಸಿಎಂ ಮಾಡಿ; ಇಲ್ಲದಿದ್ದರೆ ಪಂಜಾಬ್ ನಲ್ಲಾದಂತೆ ಆಗುತ್ತದೆ: ಸೋನಿಯಾಗೆ ಸಚಿನ್ ಪೈಲಟ್ ಮನವಿ
ಎರಡುವರೆ ವರ್ಷದ ಅವಧಿಗೆ ಸಿಎಂ ಸ್ಥಾನವನ್ನು ಹಂಚಿಕೊಳ್ಳುವ ಸೂತ್ರವನ್ನು ಜಾರಿಗೊಳಿಸಲಾಗುತ್ತದೆಯೇ ಅಥವಾ ಇಲ್ಲ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಛತ್ತೀಸ್‌ಗಢದಲ್ಲಿ ಮತ್ತೆ ಗೆಲ್ಲಲು ನಮಗೆ ಉತ್ತಮ ಅವಕಾಶವಿದೆ. ಆದರೆ ಈ ವಿಷಯವನ್ನು ಸಮಯೋಚಿತವಾಗಿ ಪರಿಹರಿಸಬೇಕು” ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಡಿಯೋ ಅವರು ಕಳೆದ ಕೆಲವು ತಿಂಗಳುಗಳಿಂದ ಈ ವಿಷಯದ ಬಗ್ಗೆ ಉನ್ನತ ನಾಯಕರನ್ನು ಭೇಟಿ ಮಾಡಿದ್ದಾರೆ. "ಅವರು ಮೌನವಾಗಿದ್ದಾರೆ. ಆದರೆ ಸುಮ್ಮನಿಲ್ಲ. ಈ ಸಂಬಂಧ ರಾಜ್ಯ ಉಸ್ತುವಾರಿ ಪಿಎಲ್ ಪುನಿಯಾ ಮತ್ತು ಉನ್ನತ ನಾಯಕರಿಗೆ ತಮ್ಮನ್ನು ಸಿಎಂ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಸದ್ಯ ಚೆಂಡು ಕಾಂಗ್ರೆಸ್ ಅಧ್ಯಕ್ಷರ ಅಂಗಳದಲ್ಲಿದೆ" ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.