ಮದುವೆ ಮಂಟಪದಲ್ಲಿ ವಧುವನ್ನು ಗುಂಡಿಕ್ಕಿ ಕೊಂದ ಪಾಗಲ್ ಪ್ರೇಮಿ!
ವಧುವಿನ ಪ್ರೇಮ ಪ್ರಕರಣ ಮದುವೆಯ ಮಂಟಪದಲ್ಲಿ ಆಕೆಯ ಹತ್ಯೆಯ ಮೂಲಕ ಅಂತ್ಯಗೊಂಡ ನೋವಿನ ಘಟನೆ ನೌಜಿಲ್ ಪ್ರದೇಶದ ಮಥುರಾದ ಮುಬಾರಿಕ್ಪುರ ಗ್ರಾಮದಲ್ಲಿ ನಡೆದಿದ್ದು, ಮದುವೆ ಸಮಾರಂಭದಲ್ಲಿ ನೆರೆದಿದ್ದ ಮಂದಿಯನ್ನು ಬೆಚ್ಚಿಬೀಳಿಸಿದೆ.
Published: 29th April 2022 09:13 PM | Last Updated: 29th April 2022 09:13 PM | A+A A-

ಗುಂಡೇಟಿಗೆ ಬಲಿಯಾದ ವಧು
ಮಥುರಾ: ವಧುವಿನ ಪ್ರೇಮ ಪ್ರಕರಣ ಮದುವೆಯ ಮಂಟಪದಲ್ಲಿ ಆಕೆಯ ಹತ್ಯೆಯ ಮೂಲಕ ಅಂತ್ಯಗೊಂಡ ನೋವಿನ ಘಟನೆ ನೌಜಿಲ್ ಪ್ರದೇಶದ ಮಥುರಾದ ಮುಬಾರಿಕ್ಪುರ ಗ್ರಾಮದಲ್ಲಿ ನಡೆದಿದ್ದು, ಮದುವೆ ಸಮಾರಂಭದಲ್ಲಿ ನೆರೆದಿದ್ದ ಮಂದಿಯನ್ನು ಬೆಚ್ಚಿಬೀಳಿಸಿದೆ.
ವಧುವನ್ನು ಆಕೆಯ ಪ್ರಿಯಕರನೇ ಗುಂಡಿಕ್ಕಿ ಕೊಂದದ್ದು ದುರದೃಷ್ಟಕರ. ಮೃತ ವಧುವನ್ನು ಕಾಜಲ್ ಎಂದು ಗುರುತಿಸಲಾಗಿದ್ದು, ಆಕೆ ಮದುವೆ ಮಂಟಪದಲ್ಲಿ ಹೂವಿನ ಹಾರ ಬದಲಾಯಿಸಿಕೊಳ್ಳುವ ಶಾಸ್ತ್ರ ಮುಗಿದ ಕೂಡಲೇ ಗುಂಡಿಕ್ಕಿ ಕೊಂದಿದ್ದಾನೆ.
ಆರೋಪಿಯು ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಆಕೆಯ ಮದುವೆ ಬೇರೊಬ್ಬ ಪುರುಷನೊಂದಿಗಿನ ನಿಶ್ಚಯವಾಗಿದೆ ಎಂದು ತಿಳಿದು ಕೋಪಗೊಂಡಿದ್ದನು ಎಂದು ವರದಿಯಾಗಿದೆ.
ಸಂತ್ರಸ್ತೆಯ ತಂದೆ ಖುಬಿ ರಾಮ್ ಪ್ರಜಾಪತಿ, ನನ್ನ ಮಗಳು ಫ್ರೆಶ್ ಆಗಲು ಕೋಣೆಗೆ ಹೋದಾಗ ಅಪರಿಚಿತ ವ್ಯಕ್ತಿ ಬಂದು ಗುಂಡಿಕ್ಕಿ ಕೊಂದಿದ್ದಾನೆ. ಈ ಘಟನೆ ನಂಬಲು ಅಸಾಧ್ಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.