ಕೇರಳ: ಹದಿಹರೆಯದ ಯುವಕರ ಮೇಲೆ ಲೈಂಗಿಕ ದೌರ್ಜನ್ಯ- ಕ್ರೈಸ್ತ ಪಾದ್ರಿಗೆ 18 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಹದಿಹರೆಯದ ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕ್ರೈಸ್ತ ಪಾದ್ರಿಯೋರ್ವನಿಗೆ ಕೇರಳ ಹೈಕೋರ್ಟ್ 18 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ನೀಡಿದೆ.

Published: 30th April 2022 09:11 PM  |   Last Updated: 30th April 2022 09:11 PM   |  A+A-


(Express Illustrations)

ಸಾಂಕೇತಿಕ ಚಿತ್ರ

The New Indian Express

ಕೊಲ್ಲಂ: ಹದಿಹರೆಯದ ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕ್ರೈಸ್ತ ಪಾದ್ರಿಯೋರ್ವನಿಗೆ ಕೇರಳ ಹೈಕೋರ್ಟ್ 18 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ನೀಡಿದೆ. 2017 ರಲ್ಲಿ ಕೊಲ್ಲಂ ನಲ್ಲಿ ಈ ಪಾದ್ರಿ ಅಂದು ಅಪ್ರಾಪ್ತರಾಗಿದ್ದ ನಾಲ್ವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಫಾದರ್ ಥಾಮ ಪರೆಕ್ಕುಲಮ್ (35) ಚೆನ್ನೈ ಮೂಲದ ಎಸ್ ಡಿಎಂ ಮೈನರ್ ಸೆಮಿನರಿಯ ಸದಸ್ಯ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯಾಗಿದ್ದು ಈತನ ವಿರುದ್ಧ ಪುಥೂರ್ ಪೊಲೀಸರು ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ)ರ ಅಡಿಯಲ್ಲಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
 
ಘಟನೆ ನಡೆದಾಗ ಸೆಮಿನರಿ ವಿದ್ಯಾರ್ಥಿಗಳಾಗಿದ್ದ ನಾಲ್ವರು ಯುವಕರೂ 16 ವಯಸ್ಸಿನವರಾಗಿದ್ದರು. ಪಾದ್ರಿ ಅಂದು ರೆಕ್ಟಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರತಿ ಮೂರು ಪ್ರಕರಣಗಳಲ್ಲೂ ತಲಾ 5 ವರ್ಷ ಶಿಕ್ಷೆಯನ್ನು ವಿಧಿಸಲಾಗಿದ್ದು, ನಾಲ್ಕನೇ ಪ್ರಕರಣದಲ್ಲಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ ಹಾಗೂ ಪ್ರತಿ ಪ್ರಕರಣದ ಸಂತ್ರಸ್ತನಿಗೂ 1 ಲಕ್ಷ ರೂಪಾಯಿ ಪರಿಹಾರ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp