ಕೇಂದ್ರ ಸಚಿವ ಮಾಂಡವೀಯಾ, ಆಧಾರ್ ಪೂನಾವಾಲ ಭೇಟಿ: ಮಂಕಿಪಾಕ್ಸ್ ಲಸಿಕೆ ಕುರಿತು ಮಹತ್ವದ ಚರ್ಚೆ

ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆಯೇ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆಧಾರ್ ಪೂನಾವಾಲ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರನ್ನು ಭೇಟಿಯಾಗಿದ್ದಾರೆ. 
ಆಧಾರ್ ಪೂನಾವಾಲ
ಆಧಾರ್ ಪೂನಾವಾಲ

ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆಯೇ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆಧಾರ್ ಪೂನಾವಾಲ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರನ್ನು ಭೇಟಿಯಾಗಿದ್ದಾರೆ. 

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೂನಾವಾಲ, ಮಂಕಿಪಾಕ್ಸ್  ಲಸಿಕೆಗಾಗಿ ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ; ಈ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಮಂಕಿಪಾಕ್ಸ್‌ಗೆ ಲಸಿಕೆ ಮತ್ತು ಅದರ ಅಗತ್ಯವಿದ್ದಲ್ಲಿ ನಾವು ಸಂಶೋಧನೆ ನಡೆಸುತ್ತೇವೆ ಎಂದು ತಿಳಿಸಿದರು.

ಯಾವುದೇ ವಿದೇಶ ಪ್ರಯಾಣದ ಇತಿಹಾಸವಿಲ್ಲದಿದ್ದರೂ ಆಫ್ರಿಕಾದ ಮೂಲದ 35 ವರ್ಷದ ವ್ಯಕ್ತಿಯೊಬ್ಬರಿಗೆ ದೆಹಲಿಯಲ್ಲಿ ಮಂಕಿಪಾಕ್ಸ್ ಪಾಸಿಟಿವ್ ಕಂಡುಬಂದ ನಂತರ ಈ ಬೆಳವಣಿಗೆಯಾಗಿದೆ. ಮಂಕಿಪಾಕ್ಸ್ ರೋಗ ಲಕ್ಷಣದ ವ್ಯಕ್ತಿಯನ್ನು ದೆಹಲಿಯ ಎಲ್ ಎನ್ ಜೆಪಿ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿದೆ. ಮೊದಲ ಮಂಕಿಪಾಕ್ಸ್ ರೋಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com