ಲಖನೌ: ಉಪ ರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ಅವರನ್ನು ಬಿಎಸ್ ಪಿ ಪಕ್ಷ ಬೆಂಬಲಿಸಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಘೋಷಿಸಿದ್ದಾರೆ.
ಸಾರ್ವಜನಿಕರ ಹಿತಾಸಕ್ತಿ ಮತ್ತು ತನ್ನ ಸ್ವಂತ ಚಳವಳಿ ನಿಟ್ಟನಲ್ಲಿ ಆಗಸ್ಟ್ 6 ರಂದು ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ಅವರನ್ನು ಬೆಂಬಲಿಸಲು ಬಿಎಸ್ ಪಿ ನಿರ್ಧರಿಸಿದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ವೆಂಕಯ್ಯನಾಯ್ಡು ಅವರ ಅಧಿಕಾರವಧಿ ಆಗಸ್ಟ್ 10 ರಂದು ಕೊನೆಯಾಗುವ ಹಿನ್ನೆಲೆಯಲ್ಲಿ ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜಗದೀಪ್ ಧಂಕರ್ ಎನ್ ಡಿಎ ಅಭ್ಯರ್ಥಿಯಾದರೆ, ಮಾರ್ಗರೇಟ್ ಆಳ್ವಾ ವಿರೋಧಪಕ್ಷಗಳ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
Advertisement