ಕಾಂಗ್ರೆಸ್ ಗೆ ಕುಲ್ದೀಪ್ ಬಿಷ್ಣೋಯ್ ರಾಜೀನಾಮೆ ಬಿಜೆಪಿ ಸೇರಲು ಸಿದ್ಧತೆ

ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯ್ ಹರ್ಯಾಣ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಸಿಎಂ ಮನೋಹರ್ ಲಾಲ್ ಖಟ್ಟರ್ ಭೇಟಿಯಾದ ಕಾಂಗ್ರೆಸ್ ಮುಖಂಡ ಬಿಷ್ಣೋಯ್
ಸಿಎಂ ಮನೋಹರ್ ಲಾಲ್ ಖಟ್ಟರ್ ಭೇಟಿಯಾದ ಕಾಂಗ್ರೆಸ್ ಮುಖಂಡ ಬಿಷ್ಣೋಯ್

ಹರ್ಯಾಣ: ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯ್ ಹರ್ಯಾಣ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ವಿಧಾನಸಭಾಧ್ಯಕ್ಷ ಗಿಯಾನ್ ಚಂದ್ ಗುಪ್ತಾ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು ಹಿಸಾರ್ ಜಿಲ್ಲೆಯ ಅದಮ್ಪುರ್ ಪ್ರದೇಶದಲ್ಲಿ ಉಪಚುನಾವಣೆ ನಡೆಯಲಿದೆ. 

ಕಾಂಗ್ರೆಸ್ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಕಾಲದಲ್ಲಿದ್ದ ತನ್ನ ಸಿದ್ಧಾಂತದಿಂದ ವಿಮುಖವಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯಸಭೆಯ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಪರಿಣಾಮ ಬಿಷ್ಣೋಯ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. 

ನಾಲ್ಕು ಬಾರಿ ಶಾಸಕರು, ಎರಡು ಬಾರಿ ಸಂಸದರಾಗಿರುವ ಬಿಷ್ಣೋಯ್ ಅವರು ಹರ್ಯಾಣ ಕಾಂಗ್ರೆಸ್ ಪ್ರದೇಶದ ಮುಖ್ಯಸ್ಥರನ್ನಾಗಿ ತಮ್ಮನ್ನು ನೇಮಕ ಮಾಡಲಿಲ್ಲ ಎಂಬ ಕಾರಣಕ್ಕೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು. 

ಹರ್ಯಾಣ ಮಾಜಿ ಸಿಎಂ ಭಜನ್ ಲಾಲ್ ಅವರ ಪುತ್ರನಾಗಿರುವ ಬಿಷ್ಣೋಯ್, 2 ನೇ ಬಾರಿಗೆ ಕಾಂಗ್ರೆಸ್ ತೊರೆಯುತ್ತಿದ್ದು, 6 ವರ್ಷದ ಹಿಂದಷ್ಟೇ ಕಾಂಗ್ರೆಸ್ ಗೆ ಮರಳಿದ್ದರು. 2005 ರಲ್ಲಿ ಭೂಪೇಂದರ್ ಸಿಂಗ್ ಹೂಡಾ ಅವರು ಸಿಎಂ ಆದ ಬಳಿಕ ಬಿಷ್ಣೋಯ್ ಹಾಗೂ ಅವರ ತಂದೆ ಭಜನ್ ಲಾಲ್ 2007 ರಲ್ಲಿ ಜನ್ ಹಿತ್ ಕಾಂಗ್ರೆಸ್ ನ್ನು ಸ್ಥಾಪಿಸಿದ್ದರು. ಜೆಹೆಚ್ ಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಲೋಕಸಭಾ ಚುನಾವಣೆಯ ವೇಳೆಗೆ ಮೈತ್ರಿ ಮುರಿದುಬಿದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com