ನವದೆಹಲಿ: ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಗೆ ಹಿಗ್ಗಾಮುಗ್ಗಾ ಥಳಿತ; ವಿಡಿಯೋ ವೈರಲ್, ಮೂವರ ಬಂಧನ
ರಾಷ್ಟ್ರ ರಾಜಧಾನಿಯ ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿದ್ದ ಕೆಲವರು ಹೆಡ್ ಕಾನ್ಸ್ ಟೇಬಲ್ ಗೆ ಹಿಗ್ಗಾಮುಗ್ಗಾ ಥಳಿಸುವ ವಿಡಿಯೋ ಇತ್ತೀಚಿಗೆ ಭಾರೀ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
Published: 08th August 2022 11:54 PM | Last Updated: 09th August 2022 01:30 PM | A+A A-

ಪೊಲೀಸ್ ಕಾನ್ಸ್ ಟೇಬಲ್ ಗೆ ಥಳಿತದ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯ ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿದ್ದ ಕೆಲವರು ಹೆಡ್ ಕಾನ್ಸ್ ಟೇಬಲ್ ಗೆ ಹಿಗ್ಗಾಮುಗ್ಗಾ ಥಳಿಸುವ ವಿಡಿಯೋವೊಂದು ಇತ್ತೀಚಿಗೆ ಭಾರೀ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಶಹದಾರದಲ್ಲಿರುವ ಆನಂದ್ ವಿಹಾರ್ ಪೊಲೀಸ್ ಠಾಣೆಯೊಳಗೆ ಕೆಲವರು ಹೆಡ್ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ್ದು, ಈ ವಿಡಿಯೋ ಜುಲೈ 31ರದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಇದೀಗ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಆರೋಪಿ ವಕೀಲ ಸತೀಶ್ ಕುಮಾರ್ ಅವರನ್ನು ಒಂದು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Police arrested three more people who were part of the group/gathering that assaulted a policeman at PS Anand Vihar. Police also took police remand of accused advocate Satish Kumar for one more day to identify and arrest other accused: Delhi Police https://t.co/tYvBxLyRcc
— ANI (@ANI) August 8, 2022