ಕೇರಳ: ರಸ್ತೆ ಗುಂಡಿ ನೀರಲ್ಲೇ ಸ್ನಾನ, ಯೋಗ ಮಾಡಿದ ವ್ಯಕ್ತಿ! ಶಾಸಕರ ಮುಂದೆ ವಿಭಿನ್ನ ಪ್ರತಿಭಟನೆ, ವಿಡಿಯೋ!
ಕೇರಳದ ಮಲ್ಲಪುಂರನಲ್ಲಿ ಭಾರೀ ಮಳೆಯಿಂದ ರಸ್ತೆ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಹರಸಾಹಸಪಡುವಂತಾಗಿದೆ. ಇದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ವ್ಯಕ್ತಿಯೊರ್ವ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
Published: 10th August 2022 12:53 AM | Last Updated: 10th August 2022 01:25 PM | A+A A-

ವಿಭಿನ್ನ ಪ್ರತಿಭಟನೆ
ಮಲ್ಲಪುರಂ: ಕೇರಳದ ಮಲ್ಲಪುಂರನಲ್ಲಿ ಭಾರೀ ಮಳೆಯಿಂದ ರಸ್ತೆ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಹರಸಾಹಸಪಡುವಂತಾಗಿದೆ. ಇದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ವ್ಯಕ್ತಿಯೊರ್ವ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶಾಸಕರು ಬರುವ ಹಾದಿಯಲ್ಲಿ ರಸ್ತೆ ಗುಂಡಿ ನೀರಲ್ಲೇ ಸ್ನಾನ, ಯೋಗ ಹಾಗೂ ಧ್ಯಾನ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#WATCH | Kerala: A man in Malappuram protested against potholes on roads in a unique way by bathing & performing yoga in a water-logged pothole in front of MLA on the way pic.twitter.com/XSOCPrwD5f
— ANI (@ANI) August 9, 2022
ಹೆದ್ದಾರಿಯಲ್ಲಿನ ಗುಂಡಿಯಿಂದ ಅನೇಕ ಅಪಘಾತಗಳಾಗಿವೆ. ಈ ಸಮಸ್ಯೆಯನ್ನು ಸಂಬಂಧಿಸಿದವರ ಗಮನಕ್ಕೆ ತರುವ ದೃಷ್ಟಿಯಿಂದ ಈ ರೀತಿಯ ಪ್ರತಿಭಟನೆ ನಡೆಸಲು ಯೋಚಿಸಿದೆ. ಶಾಸಕರು ಅಲ್ಲಿಂದ ತೆರಳುತ್ತಿದ್ದಾಗ ಪ್ರತಿಭಟನೆ ನಡೆಸಿ, ಸಮಸ್ಯೆ ಬಗೆಹರಿಸುವಂತೆ ಅವರಿಗೆ ಮನವಿ ಮಾಡಿದ್ದಾಗಿ ಪ್ರತಿಭಟನಾನಿರತ ವ್ಯಕ್ತಿ ತಿಳಿಸಿದ್ದಾರೆ.