ಬ್ರೇಕ್ ವೈಫಲ್ಯ, ರಸ್ತೆ ಬದಿ ನಿಂತಿದ್ದ ಆಟೋಗಳಿಗೆ ಡಿಕ್ಕಿ ಹೊಡೆದ ಬಸ್, ಹಲವರಿಗೆ ಗಾಯ, ಭಯಾನಕ ವಿಡಿಯೋ!

ಬ್ರೇಕ್ ವೈಫಲ್ಯದಿಂದ ಬಸ್ ವೊಂದು ರಸ್ತೆ ಬದಿ ನಿಂತಿದ್ದ ಪ್ರಯಾಣಿಕ ಹಾಗೂ ಸರಕು ಸಾಗಣೆಯ ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ  ನಾಲ್ವರು ಗಾಯಗೊಂಡಿದ್ದಾರೆ. 
ಸಿಸಿಟಿವಿಯಲ್ಲಿ ದಾಖಲಾಗಿರುವ ಅಪಘಾತದ ದೃಶ್ಯ
ಸಿಸಿಟಿವಿಯಲ್ಲಿ ದಾಖಲಾಗಿರುವ ಅಪಘಾತದ ದೃಶ್ಯ

ಮುಂಬೈ: ಬ್ರೇಕ್ ವೈಫಲ್ಯದಿಂದ ಬಸ್ ವೊಂದು ರಸ್ತೆ ಬದಿ ನಿಂತಿದ್ದ ಪ್ರಯಾಣಿಕ ಹಾಗೂ ಸರಕು ಸಾಗಣೆಯ ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ  ನಾಲ್ವರು ಗಾಯಗೊಂಡಿದ್ದಾರೆ. 

ಆಟೋದಲ್ಲಿದ್ದ ವ್ಯಕ್ತಿಯನ್ನು ಕೆಲ ದೂರ ಎಳೆದೊಯ್ದಿದೆ. ಆದರೆ, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಬ್ರೇಕ್ ವೈಫಲ್ಯಗೊಂಡ ಬಸ್ ಹಿಂದಲೇ ಜನರು ಆತಂಕದಿಂದ ಓಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಸ್ ಸಂತೋಷ್ ನಗರಿಂದ ಕುರ್ಲಾಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ದಿಂಡೋಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com