ರಕ್ಷಾ ಬಂಧನ: ಎಲ್ಲೆಡೆ ಸೋದರ-ಸೋದರಿ ಭ್ರಾತೃತ್ವದ ರಾಖಿ ಹಬ್ಬದ ಸಡಗರ-ಸಂಭ್ರಮ

ಅಣ್ಣ-ತಂಗಿ, ಸಹೋದರ-ಸಹೋದರಿ ಭ್ರಾತೃತ್ವದ ಸಂಕೇತವಾದ ರಕ್ಷಾ ಬಂಧನ ದಿನವನ್ನು ದೇಶಾದ್ಯಂತ ಇಂದು ಗುರುವಾರ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಹೋದರಿಯರಿಗೆ ಸಹೋದರರು ನೀಡುವ ರಕ್ಷಣೆಯನ್ನು ಪ್ರತಿಬಿಂಬಿಸುವ ಆಚರಣೆ ಇದಾಗಿದೆ. ಸಹೋದರರಿಗೆ ತಮ್ಮ ಸಹೋದರಿಯರು ರಾಖಿ ಕಟ್ಟುವ ಮೂಲಕ ನಿಮ್ಮ ರಕ್ಷಣೆ ಸದಾ ನಮ್ಮ ಮೇಲಿರಲಿ ಎಂದು ಕೋರಿಕೊಳ್ಳುವ ಹಬ್ಬವಾಗಿದೆ.
ಅಣ್ಣ ಯಶ್ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದ ತಂಗಿ ನಂದಿನಿ
ಅಣ್ಣ ಯಶ್ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದ ತಂಗಿ ನಂದಿನಿ

ಬೆಂಗಳೂರು: ಅಣ್ಣ-ತಂಗಿ, ಸಹೋದರ-ಸಹೋದರಿ ಭ್ರಾತೃತ್ವದ ಸಂಕೇತವಾದ ರಕ್ಷಾ ಬಂಧನ ದಿನವನ್ನು ದೇಶಾದ್ಯಂತ ಇಂದು ಗುರುವಾರ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಹೋದರಿಯರಿಗೆ ಸಹೋದರರು ನೀಡುವ ರಕ್ಷಣೆಯನ್ನು ಪ್ರತಿಬಿಂಬಿಸುವ ಆಚರಣೆ ಇದಾಗಿದೆ. ಸಹೋದರರಿಗೆ ತಮ್ಮ ಸಹೋದರಿಯರು ರಾಖಿ ಕಟ್ಟುವ ಮೂಲಕ ನಿಮ್ಮ ರಕ್ಷಣೆ ಸದಾ ನಮ್ಮ ಮೇಲಿರಲಿ ಎಂದು ಕೋರಿಕೊಳ್ಳುವ ಹಬ್ಬವಾಗಿದೆ.

ಇದಕ್ಕೆ ಪ್ರತಿಯಾಗಿ ಸಹೋದರರು ಸಹೋದರಿಗೆ ರಾಖಿ ಕಟ್ಟಿದ್ದಕ್ಕೆ ಏನಾದರೊಂದು ಉಡುಗೊರೆಯನ್ನು ಕೊಡುವುದು ನಮ್ಮಲ್ಲಿರುವ ಸಂಪ್ರದಾಯವಾಗಿದೆ. ದೇಶಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಜನತೆಗೆ ಶುಭ ಹಾರೈಸಿದ್ದಾರೆ.

ಗಣ್ಯರು, ಸೆಲೆಬ್ರಿಟಿಗಳು ತಾವು ರಾಖಿ ಕಟ್ಟಿಸಿಕೊಂಡಿದ್ದನ್ನು, ರಾಖಿ ಕಟ್ಟಿದ್ದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅವರ ಸೋದರಿ ನಂದಿನಿ ಬೆಳಗ್ಗೆಯೇ ಅಣ್ಣ ಯಶ್ ಗೆ ರಾಖಿ ಕಟ್ಟಿ ಮನದುಂಬಿ ಹರಸಿದ್ದಾರೆ. ಯೋಗಾಯೋಗ ಮೂಲಕ ಒಟ್ಟಿಗೆ ಈ ಭೂಮಿಗೆ ತಂದ ನಮ್ಮನ್ನು ಪ್ರೀತಿ ಮತ್ತು ಬೆಂಬಲದಿಂದ ಬಂಧಿಯಾಗಿಸಿದೆ. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಯಶ್ ಬರೆದುಕೊಂಡಿದ್ದಾರೆ.

ಶ್ರಾವಣ ಮಾಸದಲ್ಲಿ ರಕ್ಷಾ ಬಂಧನ (Raksha Bandhan 2022) ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟುತ್ತಾರೆ. ವೈದಿಕ ಪರಂಪರೆಯಲ್ಲಿ ಇಂದು ಯುಜುರ್ ಉಪಕರ್ಮ ಆಚರಿಸುತ್ತಾರೆ. ಅಂದರೆ ಬೆಳಗ್ಗೆಯೇ ಸ್ನಾನ ಮಾಡಿ ಶುಚಿರ್ಭೂತರಾಗಿ ದೇವರಿಗೆ ಪೂಜೆ ಸಲ್ಲಿಸಿ ಹೊಸ ಜನಿವಾರ ಧರಿಸುತ್ತಾರೆ. ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ದಿನ ಅಥವಾ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com