ಬಂದಾ ದೋಣಿ ದುರಂತ: ಮತ್ತೆ ಮೂರು ಮೃತದೇಹ ಪತ್ತೆ, ಇನ್ನೂ 25 ಮಂದಿ ನಾಪತ್ತೆ

ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಾರ್ಕಾ ಪ್ರದೇಶದಲ್ಲಿ ಯಮುನಾ ನದಿಯಲ್ಲಿ ಗುರುವಾರ ದೋಣಿ ಮುಳುಗಿದ್ದ ಸ್ಥಳದಲ್ಲಿ ಶುಕ್ರವಾರ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ...
ಯಮುನಾ ನದಿ
ಯಮುನಾ ನದಿ

ಬಂದಾ: ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಾರ್ಕಾ ಪ್ರದೇಶದಲ್ಲಿ ಯಮುನಾ ನದಿಯಲ್ಲಿ ಗುರುವಾರ ದೋಣಿ ಮುಳುಗಿದ್ದ ಸ್ಥಳದಲ್ಲಿ ಶುಕ್ರವಾರ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಅಲ್ಲದೆ ಇನ್ನೂ 25 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸಹಾಯಕ್ಕಾಗಿ ಪ್ರಯಾಗ್‌ರಾಜ್‌ನಿಂದ ಡೈವರ್‌ಗಳನ್ನು ಸಹ ಕರೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂದು ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಮೂವರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಬಂದಾ ಉಪ ಪೊಲೀಸ್ ಮಹಾನಿರೀಕ್ಷಕ ವಿಪಿನ್ ಮಿಶ್ರಾ ಅವರು ತಿಳಿಸಿದ್ದಾರೆ.

ಬೋಟ್ ಮಾರ್ಕಾದಿಂದ ಫತೇಪುರ್ ಜಿಲ್ಲೆಯ ಜರೌಲಿ ಘಾಟ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯಲ್ಲಿ 30 ರಿಂದ 35 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com