
ಬಿಜೆಪಿ ಸಾಂದರ್ಭಿಕ ಚಿತ್ರ
ನವದೆಹಲಿ: ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ತಮ್ಮ ಮನೆಗಳಲ್ಲಿ ಧ್ವಜಾರೋಹಣ ಮಾಡದವರನ್ನು ದೇಶ ನಂಬುವುದಿಲ್ಲ ಎಂದು ಉತ್ತರಾಖಂಡ್ ನ ಬಿಜೆಪಿ ಮುಖ್ಯಸ್ಥ ಮಹೇಂದ್ರ ಭಟ್ ಹೇಳಿದ್ದಾರೆ.
ಇದನ್ನೂ ಓದಿ: 150 ಪಾರಂಪರಿಕ ತಾಣಗಳಲ್ಲಿ ಪ್ರತಿನಿತ್ಯ ಹಾರಲಿರುವ ತಿರಂಗ!
ಧ್ವಜಾರೋಹಣ ಮಾಡುವುದು ಸ್ವಾಭಾವಿಕವಾದದ್ದು, ಸ್ವಾತಂತ್ರ್ಯ ದಿನಾಚರಣೆ ಮಾಡುವುದಕ್ಕಾಗಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಆರೋಹಣ ಮಾಡುವ ವಿಷಯದಲ್ಲಿ ಯಾರಿಗೂ ಯಾಕೆ ಏನಾದರು ಸಮಸ್ಯೆ ಇರಬೇಕು? ಎಂದು ಮಹೇಂದ್ರ ಭಟ್ ಪ್ರಶ್ನಿಸಿದ್ದಾರೆ.
ಯಾವ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವುದಿಲ್ಲವೋ ಅಂತಹ ಮನೆಗಳ ಫೋಟೋ ತೆಗೆದು ತಮಗೆ ಕಳಿಸಬೇಕೆಂದು ತಾವು ಹೇಳಿಕೆ ನೀಡಿರುವುದನ್ನು ಅಲ್ಲಗಳೆದಿರುವ ಮಹೇಂದ್ರ ಭಟ್, ತಾವು ಹೇಳಿದ್ದು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಅನ್ವಯಿಸುತ್ತದೆ ಹಾಗೂ ಸಾರ್ವಜನಿಕರಿಗೆ ಅಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರಿಗೆ ಅಷ್ಟು ದೇಶಭಕ್ತಿಯಿದ್ದರೆ ಉಚಿತವಾಗಿ ತ್ರಿವರ್ಣ ಧ್ವಜ ಹಂಚಲಿ, ಇವರು ಕೇವಲ ಪ್ರಚಾರಪ್ರಿಯರು: ಶಿವರಾಜ್ ತಂಗಡಗಿ
ವಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದರೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಭಟ್, ದೇಶದೆಡೆಗೆ ನಿಜವಾದ ಭಾವನೆಗಳನ್ನು ಹೊಂದಿರುವವರು ಧ್ವಜಾರೋಹಣ ಮಾಡಲಿದ್ದಾರೆ ಎಂದಿದ್ದಾರೆ.