
ಎಂಇಎ ವಕ್ತಾರ ಅರಿಂದಮ್ ಬಾಗ್ಚಿ
ನವದೆಹಲಿ: ತೈವಾನ್ ಬಿಕ್ಕಟ್ಟಿನ ಬಗ್ಗೆ ಭಾರತ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.
ತೈವಾನ್-ಚೀನಾ ಬೆಳವಣಿಗೆಗಳ ಬಗ್ಗೆ ಭಾರತ ಆತಂಕಗೊಂಡಿದ್ದು, ತೈವಾನ್ ಪ್ರದೇಶದಲ್ಲಿರುವ ಯಥಾಸ್ಥಿತಿಯನ್ನು ಬದಲಾವಣೆ ಮಾಡುವ ಏಕ ಪಕ್ಷೀಯ ಕ್ರಮವನ್ನು ತಪ್ಪಿಸಬೇಕೆಂದು ಭಾರತ ಕರೆ ನೀಡಿದೆ.
ಸಂಯಮ ಕಾಯ್ದುಕೊಳ್ಳುವಂತೆ ಭಾರತ ಸಲಹೆ ನೀಡಿದ್ದು, ಪ್ರಾದೇಶಿಕವಾಗಿ ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವ ಪ್ರಯತ್ನದ ಅಗತ್ಯತೆಯನ್ನು ಒತ್ತಿ ಹೇಳಿದೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟೀವ್ಸ್ ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯನ್ನು ವಿರೋಧಿಸಿ ಚೀನಾ ತೈವಾನ್ ಆಸುಪಾಸಿನ ಪ್ರದೇಶದಲ್ಲಿ ಸೇನಾ ಡ್ರಿಲ್ ನ್ನು ನಡೆಸಿತ್ತು.
ಇದನ್ನೂ ಓದಿ: ಚೀನಾದಿಂದ ನಿರಂತರ ಬೆದರಿಕೆ ಮಧ್ಯೆ ತೈವಾನ್‌ನ ಉನ್ನತ ಕ್ಷಿಪಣಿ ಅಧಿಕಾರಿ ಶವ ಹೊಟೇಲ್ ನಲ್ಲಿ ಪತ್ತೆ!
ಈ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗಾಚಿ, ಇತರ ಎಲ್ಲಾ ರಾಷ್ಟ್ರಗಳಂತೆ ಭಾರತವೂ ಆತಂಕಗೊಂಡಿದೆ. ಸಂಯಮ ಕಾಯ್ದುಕೊಳ್ಳಬೇಕು ಹಾಗೂ ತೈವಾನ್ ಗೆ ಸಂಬಂಧಿಸಿದಂತೆ ಬದಲಾವಣೆ ಮಾಡುವ ಏಕ ಪಕ್ಷೀಯ ಕ್ರಮವನ್ನು ತಪ್ಪಿಸಬೇಕು, ಪ್ರಾದೇಶಿಕವಾಗಿ, ಉದ್ವಿಗ್ನತೆಯನ್ನು ಕಡಿಮೆಗೊಳಿಸಿ, ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಭಾರತ ಹೇಳಿದ್ದಾರೆ.