ಹರ್ ಘರ್ ತಿರಂಗಾ: ಫೇಸ್ಬುಕ್, ಟ್ವೀಟರ್ ಡಿಪಿಗೆ ತ್ರಿವರ್ಣಧ್ವಜ ಹಾಕಿ ಟೀಕಾಕಾರರ ಬಾಯಿ ಮುಚ್ಚಿಸಿದ ಆರ್‌ಎಸ್‌ಎಸ್

ವಿಪಕ್ಷ ಕಾಂಗ್ರೆಸ್ ನ ತೀವ್ರ ವಿರೋಧದ ಬಳಿಕ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ತನ್ನ ಸಾಮಾಜಿಕ ಖಾತೆಗಳ ಪ್ರೊಫೈಲ್ ಫೋಟೋಗಳನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿದೆ. 
ಆರ್ ಎಸ್ಎಸ್ ಟ್ವೀಟರ್ ಖಾತೆ ಡಿಪಿ
ಆರ್ ಎಸ್ಎಸ್ ಟ್ವೀಟರ್ ಖಾತೆ ಡಿಪಿ

ನವದೆಹಲಿ: ವಿಪಕ್ಷ ಕಾಂಗ್ರೆಸ್ ನ ತೀವ್ರ ವಿರೋಧದ ಬಳಿಕ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ತನ್ನ ಸಾಮಾಜಿಕ ಖಾತೆಗಳ ಪ್ರೊಫೈಲ್ ಫೋಟೋಗಳನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿದೆ. 

ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ಅಮೃತೋತ್ಸವದ ಅಂಗವಾಗಿ ಸಾಮಾಜಿಕ ಖಾತೆಗಳನ್ನು ಹೊಂದಿರುವ ಪ್ರತಿಯೊಬ್ಬರು ತ್ರಿವರ್ಣಧ್ವಜವನ್ನು ತಮ್ಮ ಡಿಪಿಗಳಿಗೆ ಹಾಕುವಂತೆ ಕರೆ ನೀಡಿದ್ದರು. ಇದರ ಬೆನ್ನಲ್ಲೆ ಹಲವು ಪಕ್ಷಗಳು, ರಾಜಕೀಯ ನಾಯಕರು ತಮ್ಮ ಪ್ರೊಫೈಲ್ ಫೋಟೋಗಳಿಗೆ ತ್ರಿವರ್ಣಧ್ವಜವನ್ನು ಹಾಕಿದ್ದರು. 

ಆದರೆ ಆರ್‌ಎಸ್‌ಎಸ್ ಮಾತ್ರ ಸಾಂಪ್ರಾದಾಯಿಕ ಕೇಸರಿ ಧ್ವಜದ ಫೋಟೋವನ್ನು ಬದಲಿಸಿರಲಿಲ್ಲ. ಇದೀಗ ಅದನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿದೆ. ಇಂದಿನಿಂದ ಆಗಸ್ಟ್ 15ರವರೆಗೂ ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗುತ್ತಿದ್ದು ಇಂದು ಡಿಪಿ ಬದಲಿಸಿ ಆರ್‌ಎಸ್‌ಎಸ್ ಟೀಕಾಕಾರರ ಬಾಯಿ ಮುಚ್ಚಿಸಿದೆ. 

ಆರ್‌ಎಸ್‌ಎಸ್ 52 ವರ್ಷಗಳವರೆಗೂ ನಾಗಪುರದ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿರಲಿಲ್ಲ. ಇಂತಹ ಸಂಘಟನೆ ಇದೀಗ ರಾಷ್ಟ್ರಧ್ವಜವನ್ನು ತನ್ನ ಡಿಪಿಗೆ ಹಾಕಿಕೊಳ್ಳುತ್ತದಾ ಎಂದು ಲೇವಡಿ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com