ಸ್ವಾತಂತ್ರೋತ್ಸವ: ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ ಎಫ್, ಪಾಕ್ ರೆಂಜರ್ಸ್ ನಡುವೆ ಪರಸ್ಪರ ಸಿಹಿ ವಿನಿಮಯ

ಸ್ವಾತಂತ್ರೋತ್ಸವ ಅಂಗವಾಗಿ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಅಠಾರಿ- ವಾಘಾ ಗಡಿಯಲ್ಲಿ  ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನದ ರೆಂಜರ್ಸ್ ಗಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.
ಬಿಎಸ್ ಎಫ್ ಯೋಧರು, ಪಾಕ್ ರೆಂಜರ್ಸ್ ಗಳು
ಬಿಎಸ್ ಎಫ್ ಯೋಧರು, ಪಾಕ್ ರೆಂಜರ್ಸ್ ಗಳು

ಜಮ್ಮು-ಕಾಶ್ಮೀರ: ಸ್ವಾತಂತ್ರೋತ್ಸವ ಅಂಗವಾಗಿ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಅಠಾರಿ- ವಾಘಾ ಗಡಿಯಲ್ಲಿ  ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನದ ರೆಂಜರ್ಸ್ ಗಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿನ್ನೆ ದಿನ ಭಾರತೀಯ ಪಡೆ ಅವರಿಗೆ ಶುಭಾಶಯ ಕೋರಿತ್ತು. ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ಮತ್ತು ಪಂಜಾಬ್, ಜಮ್ಮು-ಕಾಶ್ಮೀರದ ಗಡಿಯಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳಲಾಗಿತ್ತು. ಅಠಾರಿ- ವಾಘಾ ಗಡಿಯಲ್ಲಿ ಪಾಕಿಸ್ತಾನದ ರೆಂಜರ್ಸ್ ಗಳು ಬಿಎಸ್ ಎಫ್ ಗೆ ಸಿಹಿ ನೀಡಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಇಂದು ಭಾರತ ಗಡಿ ಭದ್ರತಾ ಕೂಡಾ ಪಾಕಿಸ್ತಾನದ ರೆಂಜರ್ಸ್ ಗಳಿಗೆ ಸಿಹಿ ನೀಡಿದ್ದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ದೇಶದ ಗತ ವೈಭವ್ಯ, ಇಲ್ಲಿನ ಜನರು, ಸಂಸ್ಕೃತಿ ಮತ್ತು ಸಾಧನೆಯನ್ನು ಸ್ಮರಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com