ಕಾರ್ಮಿಕರಿಗೆ ಕಳಪೆ ಆಹಾರದ ಆರೋಪ: ಕೇಟರಿಂಗ್ ಮ್ಯಾನೇಜರ್ ಗೆ ಶಿವಸೇನೆ ಶಾಸಕನಿಂದ ಕಪಾಳಮೋಕ್ಷ!
ಶಿವಸೇನೆಯ ಶಾಸಕ ಸಂತೋಷ್ ಬಂಗಾರ್ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವ ಕೇಟರಿಂಗ್ ಉದ್ಯೋಗಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
Published: 16th August 2022 09:40 PM | Last Updated: 16th August 2022 09:40 PM | A+A A-

ಕೇಟರಿಂಗ್ ವ್ಯವಸ್ಥಾಪಕನಿಗೆ ಶಿವಸೇನೆ ಶಾಸಕನಿಂದ ಕಪಾಳ ಮೋಕ್ಷ
ಮುಂಬೈ: ಶಿವಸೇನೆಯ ಶಾಸಕ ಸಂತೋಷ್ ಬಂಗಾರ್ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವ ಕೇಟರಿಂಗ್ ಉದ್ಯೋಗಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಶಿವಸೆನೆಯ ಶಾಸಕ ಈ ರೀತಿ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಹಾರದ ಬಗ್ಗೆ ಪ್ರಶ್ನಿಸುವಾಗ ಬಂಗಾರ್ ಅವರು ಎರಡು ಬಾರಿ ಕೆನ್ನೆಗೆ ಹೊಡೆದಿರುವುದು ವೈರಲ್ ಆಗತೊಡಗಿದೆ.
ಈ ಘಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಬಂಗಾರ್, ಮಿಡ್ ಡೇ ಮೀಲ್ಸ್ ಯೋಜನೆಯ ಆಹಾರವನ್ನು ಕಳಪೆ ಗುಣಮಟ್ಟದ ಸರಕುಗಳಿಂದ ಮಾಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕರು, ಇದು ಅನುದಾನಗಳನ್ನು ಲೂಟಿ ಹೊಡೆಯುತ್ತಿರುವ ಸರ್ಕಾರವಾಗಿದ್ದು, ಜನರ ಜೀವದೊಂದಿಗೆ ಆಟವಾಡುತ್ತಿದೆ. ರಾಜ್ಯ ಸರ್ಕಾರ ಈ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಏಕನಾಥ್ ಶಿಂಧೆ ಬಣದ ಶಾಸಕ ಹೇಳಿದ್ದಾರೆ.