
ಬಂಧನ
ಅಮೃತ್ ಸರ: ಪೊಲೀಸ್ ಅಧಿಕಾರಿಯ ವಾಹನದ ಕೆಳಗೆ ಐಇಡಿ ಪತ್ತೆಯಾದ ಪ್ರಕರಣದಲ್ಲಿ ಪಂಜಾಪ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿರುವ ಇಬ್ಬರು ಸ್ಫೋಟಕವನ್ನು ಇರಿಸಿದ್ದರು. ಬಂಧನಕ್ಕೊಳಗಾಗಿರುವ ಇಬ್ಬರೂ ತರ್ನ್ ತರನ್ ಜಿಲ್ಲೆಯ ಪಟ್ಟಿ ಪ್ರದೇಶದ ನಿವಾಸಿಗಳಾಗಿದ್ದಾರೆ.
ರಂಜಿತ್ ಅವೆನ್ಯೂ ಪ್ರದೇಶದಲ್ಲಿ ಸಬ್ ಇನ್ಸ್ಪೆಕ್ಟರ್ ದಿಬಾಘ್ ಸಿಂಗ್ ಅವರ ಎಸ್ ಯುವಿ ಅಡಿಯಲ್ಲಿ ಸ್ಫೋಟಕ ಸಾಧನ ಪತ್ತೆಯಾಗಿತ್ತು. ಕಾರ್ ಕ್ಲೀನರ್ ಈ ಸ್ಫೋಟಕವನ್ನು ಪತ್ತೆ ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ದ್ವಿಚಕ್ರ ವಾಹನ ಸವಾರರು ಎಸ್ ಯುವಿ ಅಡಿಯಲ್ಲಿ ಸ್ಫೋಟಕ ಇರಿಸಿ ಪರಾರಿಯಾಗಿದ್ದು ದಾಖಲಾಗಿತ್ತು.
ಇದನ್ನೂ ಓದಿ: ಪಂಜಾಬ್: ಸಬ್‌ಇನ್ಸ್‌ಪೆಕ್ಟರ್ ಜೀಪ್ ಗೆ ಬಾಂಬ್ ಇಟ್ಟ ದುಷ್ಕರ್ಮಿಗಳು, ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪ್ರಧಾನ ನಿರ್ದೇಶಕ ಆರ್ ಎನ್ ಡೋಕೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸುಧಾರಿತ ಸ್ಫೋಟಕ ಸಾಧನ ಅಂದಾಜು 2.70 ಕೆಜಿಯಷ್ಟು ತೂಕವಿತ್ತು ಹಾಗೂ ಆರ್ ಡಿಎಕ್ಸ್, ಟೈಮರ್ ನ್ನು ಒಳಗೊಂಡಿತ್ತು.