ಹರ್ ಘರ್ ತಿರಂಗ ಅಭಿಯಾನ: ಈ ವರೆಗೂ 6 ಕೋಟಿಗೂ ಅಧಿಕ "ಫ್ಲಾಗ್ ಸೆಲ್ಫಿ" ಅಪ್ ಲೋಡ್ 

ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಪ್ರಾರಂಭಿಸಲಾಗಿದ್ದ ವೆಬ್ ಸೈಟ್ ನಲ್ಲಿ ಈ ವರೆಗೂ 6 ಕೋಟಿಗೂ ಹೆಚ್ಚಿನ ಮಂದಿ ಧ್ವಜದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. 
ಹರ್ ಘರ್ ತಿರಂಗ  (ಸಂಗ್ರಹ ಚಿತ್ರ)
ಹರ್ ಘರ್ ತಿರಂಗ (ಸಂಗ್ರಹ ಚಿತ್ರ)

ನವದೆಹಲಿ: ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಪ್ರಾರಂಭಿಸಲಾಗಿದ್ದ ವೆಬ್ ಸೈಟ್ ನಲ್ಲಿ ಈ ವರೆಗೂ 6 ಕೋಟಿಗೂ ಹೆಚ್ಚಿನ ಮಂದಿ ಧ್ವಜದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. 

ಈ ಮಾಹಿತಿಯನ್ನು ಸರ್ಕಾರ ಹಂಚಿಕೊಂಡಿದ್ದು, ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಜಿ ಕಿಶನ್ ರೆಡ್ಡಿ ಅಭಿಯಾನವನ್ನು ಯಶಸ್ವಿಗೊಳಿಸಲು ಇಡೀ ದೇಶವೇ ಒಂದಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಸಂಸ್ಕೃತಿ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಹಲವಾರು ಮೈಲಿಗಲ್ಲುಗಳು ಸಾಧಿಸಲ್ಪಟ್ಟಿವೆ ಎಂದು ಹೇಳಿದೆ.
 
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಹರ್ ಘರ್ ತಿರಂಗಾ ಅಭಿಯಾನ ಘೋಷಿಸಿದ್ದ ಪ್ರಧಾನಿ ಮೋದಿ,  ಭಾಗವಾಗಿ ಮನೆ ಮನೆಗಳಲ್ಲಿ ತಿರಂಗಾ ಹಾರಿಸುವುದು/ ಪ್ರದರ್ಶಿಸಲು ಜುಲೈ 22 ರಂದು ಕರೆ ನೀಡಿದ್ದರು. ಇದಕ್ಕಾಗಿ 
www.harghartiranga.com ಎಂಬ ವಿಶೇಷ ವೆಬ್ ಸೈಟ್ ನ್ನು ಪ್ರಾರಂಭಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com