'ಮೇಕ್ ಇಂಡಿಯಾ ನಂ.1' ಮಿಷನ್‌ಗೆ ಸಿಎಂ ಕೇಜ್ರಿವಾಲ್ ಚಾಲನೆ; ಶಿಕ್ಷಣ, ಆರೋಗ್ಯ ರಕ್ಷಣೆಯತ್ತ ಹೆಚ್ಚಿನ ಗಮನ!
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡುವ ರಾಷ್ಟ್ರೀಯ ಮಿಷನ್ ಗೆ ಚಾಲನೆ ನೀಡಿದರು. ಅಲ್ಲದೆ ಅದರಲ್ಲಿ ಎಲ್ಲಾ ನಾಗರಿಕರು ಮತ್ತು ರಾಜಕೀಯ ಪಕ್ಷಗಳು ಸೇರುವಂತೆ ಕರೆ ನೀಡಿದರು.
Published: 17th August 2022 04:02 PM | Last Updated: 17th August 2022 04:02 PM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡುವ ರಾಷ್ಟ್ರೀಯ ಮಿಷನ್ ಗೆ ಚಾಲನೆ ನೀಡಿದರು. ಅಲ್ಲದೆ ಅದರಲ್ಲಿ ಎಲ್ಲಾ ನಾಗರಿಕರು ಮತ್ತು ರಾಜಕೀಯ ಪಕ್ಷಗಳು ಸೇರುವಂತೆ ಕರೆ ನೀಡಿದರು.
ನಾಗರಿಕರಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಘನತೆ ಮತ್ತು ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವ ಗುರಿಯನ್ನು ಸಾಧಿಸುವ ಅಗತ್ಯವಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಉಪಕ್ರಮದಲ್ಲಿ ಭಾಗಿಯಾಗುವಂತೆ ಜನರನ್ನು ಉತ್ತೇಜಿಸಲು 'ಮೇಕ್ ಇಂಡಿಯಾ ನಂ.1' ಅಭಿಯಾನದ ಭಾಗವಾಗಿ ದೇಶಾದ್ಯಂತ ಸಂಚರಿಸುವುದಾಗಿ ಹೇಳಿದ ಅವರು, ಮಿಷನ್ ಅರಾಜಕೀಯ ಸ್ವರೂಪದ್ದಾಗಿದೆ ಎಂದರು.
ಇದನ್ನೂ ಓದಿ: ಗುಜರಾತ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ, ಖಾಸಗಿ ಶಾಲೆಗಳ ಆಡಿಟ್: ಕೇಜ್ರಿವಾಲ್ ಭರವಸೆ
'ಇದು ಯಾವುದೇ ರಾಜಕೀಯ ಪಕ್ಷದ ಧ್ಯೇಯವಲ್ಲ. ಇದು ರಾಷ್ಟ್ರೀಯ ಧ್ಯೇಯವಾಗಿದೆ. ನಾನು ಬಿಜೆಪಿ ಮತ್ತು ಇತರ ಎಲ್ಲಾ ಪಕ್ಷಗಳು ಮುಂದೆ ಬರಲು ಮತ್ತು ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡಲು ಈ ಉಪಕ್ರಮಕ್ಕೆ ಕೈಜೋಡಿಸಬೇಕೆಂದು ನಾನು ಕರೆ ನೀಡುತ್ತೇನೆ.
ಭಾರತದ ನಂತರ ಸಿಂಗಾಪುರದಂತಹ ಹಲವು ದೇಶಗಳಿಗೆ ಸ್ವಾತಂತ್ರ್ಯ ದೊರೆತರೂ ಅವು ನಮಗಿಂತ ಮುಂದಿ. ಭಾರತೀಯರು 'ವಿಶ್ವದ ಅತ್ಯಂತ ಬುದ್ಧಿವಂತ ಮತ್ತು ಶ್ರಮಜೀವಿ' ಆಗಿದ್ದರೂ ಭಾರತ ಏಕೆ ಹಿಂದುಳಿದಿದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.