'ಬಿಜೆಪಿ ಸೇರುವುದು ಸೇರಿದಂತೆ ಎಲ್ಲಾ ಆಯ್ಕೆಗಳು ಮುಕ್ತ': ಜೆಡಿಯು ಮಾಜಿ ಅಧ್ಯಕ್ಷ ಆರ್‌ಸಿಪಿ ಸಿಂಗ್

ಬಿಹಾರದಲ್ಲಿ ರಾಜಕೀಯ ಬಿರುಗಾಳಿಯ ನಡುವೆ ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರು ಬಿಜೆಪಿ ಸೇರುವುದು ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸುತ್ತಿದ್ದೇನೆ" ಎಂದು ಗುರುವಾರ ಹೇಳಿದ್ದಾರೆ.
ನಿತೀಶ್ ಕುಮಾರ್ -  ಆರ್‌ಸಿಪಿ ಸಿಂಗ್
ನಿತೀಶ್ ಕುಮಾರ್ - ಆರ್‌ಸಿಪಿ ಸಿಂಗ್

ಪಾಟ್ನಾ: ಬಿಹಾರದಲ್ಲಿ ರಾಜಕೀಯ ಬಿರುಗಾಳಿಯ ನಡುವೆ ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರು ಬಿಜೆಪಿ ಸೇರುವುದು ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸುತ್ತಿದ್ದೇನೆ" ಎಂದು ಗುರುವಾರ ಹೇಳಿದ್ದಾರೆ.

ಬಿಜೆಪಿ ಜತೆ ಮೈತ್ರಿ ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ "ಮಹಾಘಟಬಂಧನ್" ನೊಂದಿಗೆ ಮತ್ತೆ ಸರ್ಕಾರ ರಚಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀವ್ರ  ವಾಗ್ದಾಳಿ ನಡೆಸಿದ ಮಾಜಿ ಕೇಂದ್ರ ಸಚಿವ, ಜೆಡಿಯು ಹಿರಿಯ ನಾಯಕ ಆರ್ ಸಿಪಿ ಸಿಂಗ್, ಅವರು ಈ ಜನ್ಮ ಅಲ್ಲ ಇನ್ನೂ ಏಳು ಜನ್ಮ ಎತ್ತಿದರೂ ಪ್ರಧಾನಿಯಾಗಲ್ಲ ಎಂದಿದ್ದಾರೆ.

ನೀವು ಬಿಜೆಪಿ ಸೇರಲು ಬಯಸುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ಯಾಕೆ ಸೇರಬಾರದು? "ನನಗೆ ಎಲ್ಲಾ ಆಯ್ಕೆಗಳಿವೆ" ಎಂದು ಹೇಳಿದರು.

ಜೆಡಿಯು ಮತ್ತೊಂದು ಅವಧಿಗೆ ರಾಜ್ಯಸಭಾ ಸ್ಥಾನ ನಿರಾಕರಿಸಿದ ನಂತರ ಆರ್ ಸಿಪಿ ಸಿಂಗ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಚಂದ್ರಶೇಖರ್, ಎಚ್ ಡಿ ದೇವೇಗೌಡ, ಐ ಕೆ ಗುಜರಾಲ್ ಮುಂತಾದವರು ಪ್ರಧಾನಿಯಾಗಿ ಅಲ್ಪಾವಧಿಯ ಆನಂದ ಅನುಭವಿಸಿದಂತಹ ರಾಜಕೀಯ ಅಸ್ಥಿರತೆ ಈಗ ದೇಶದಲ್ಲಿ ಇಲ್ಲ ಎಂದು ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com