ಭಯಾನಕ: ಅತ್ಯಾಚಾರ ವಿರೋಧಿಸಿದ ಮಹಿಳಾ ಅಥ್ಲೀಟ್ ಅನ್ನು ಕ್ರೀಡಾಂಗಣದ ಟೆರೇಸ್‌ನಿಂದ ತಳ್ಳಿ ಕೊಲೆ ಯತ್ನ!
ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳಾ ಅಥ್ಲೀಟ್ ಳನ್ನು ಕ್ರೀಡಾಂಗಣದ ಟೆರೇಸ್‌ನಿಂದ 'ತಳ್ಳಿ ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ಪಂಜಾಬ್ ನಲ್ಲಿ ನಡೆದಿದೆ.
Published: 18th August 2022 04:36 PM | Last Updated: 18th August 2022 05:50 PM | A+A A-

ಸಾಂದರ್ಭಿಕ ಚಿತ್ರ
ಚಂಡೀಗಢ: ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳಾ ಅಥ್ಲೀಟ್ ಳನ್ನು ಕ್ರೀಡಾಂಗಣದ ಟೆರೇಸ್‌ನಿಂದ 'ತಳ್ಳಿ ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ 18 ವರ್ಷದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಯುವಕರು ಕ್ರೀಡಾಂಗಣದ ಮೇಲ್ಛಾವಣಿಯಿಂದ ತಳ್ಳಿ ಆಕೆಯ ಕೊಲೆಗೆ ಯತ್ನಿಸಿದ್ದಾರೆ. ಕೆಳಗೆ ಬಿದ್ದ ಮಹಿಳಾ ಅಥ್ಲೀಟ್ ಗೆ ದೇಹದ ಹಲವೆಡೆ ಮುರಿತಗಳು ಉಂಟಾಗಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈ ದಾಳಿ ಮಾದರಿ ಉಗ್ರದಾಳಿಗೆ ಸಂಚು?; ಮಹಾರಾಷ್ಟ್ರದ ಬೀಚ್ ಬಳಿ ಸ್ಫೋಟಕ, ಬಂದೂಕುಗಳಿದ್ದ ಶಂಕಿತ ದೋಣಿ ಪತ್ತೆ
ಸಂತ್ರಸ್ಥ ಆಟಗಾರ್ತಿಯನ್ನು ಲುಧಿಯಾನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಎರಡೂ ಕಾಲುಗಳು ಮುರಿದಿದ್ದು, ದವಡೆಯಲ್ಲಿ ಗಾಯಗಳಾಗಿವೆ. ವೈದ್ಯರಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಆಗಸ್ಟ್ 12 ರಂದು ಈ ಘಟನೆ ನಡೆದಿದ್ದು, ಘಟನೆ ಬಳಿಕ ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಪ್ರಕಾರ, ಅವರ ಮಗಳು ಅಭ್ಯಾಸಕ್ಕಾಗಿ ಮೊಗಾದ ಕ್ರೀಡಾಂಗಣಕ್ಕೆ ಹೋಗಿದ್ದರು. ಜತಿನ್ ಕಾಂಡ ಎಂದು ಗುರುತಿಸಲಾದ ಆರೋಪಿಗಳಲ್ಲಿ ಒಬ್ಬರು ಕ್ರೀಡಾಂಗಣದಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಆಕೆ ಪ್ರತಿಭಟಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅವನು ಅವಳನ್ನು ಸುಮಾರು 25 ಅಡಿ ಎತ್ತರ ಮೇಲ್ಛಾವಣಿ ಮೇಲಿಂದ ತಳ್ಳಿದನು. ಇದರಿಂದ ಅವಳಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ನಕಲಿ, ದೇಶ ವಿರೋಧಿ ವಿಷಯ ಪ್ರಸಾರ: ಏಳು ಭಾರತೀಯ, ಒಂದು ಪಾಕ್ ಯೂಟ್ಯೂಬ್ ಚಾನೆಲ್ ಗೆ ಕೇಂದ್ರ ನಿರ್ಬಂಧ
ಜತಿನ್ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಐಪಿಸಿಯ 307 (ಕೊಲೆ ಯತ್ನ) ಮತ್ತು 376 (ಅತ್ಯಾಚಾರ) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೊಗಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಖುರಾನಾ ಗುರುವಾರ ತಿಳಿಸಿದ್ದಾರೆ.