2 ವರ್ಷಗಳ ಬಳಿಕ ಮುಂಬೈ ನಲ್ಲಿ ಅದ್ಧೂರಿ ದಹಿ ಹಂಡಿ ಆಚರಣೆ; 24 ಮಂದಿಗೆ ಗಾಯ!

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಹಾರಾಷ್ಟ್ರದಲ್ಲಿ ಅದ್ಧೂರಿಯಾಗಿ ದಹಿ ಹಂಡಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಂಬೈ ನಲ್ಲಿ ಸಂಭ್ರಮಾಚರಣೆ ಎಂದಿಗಿಂತಲೂ ಹೆಚ್ಚಾಗಿದೆ. 
ದಹಿ ಹಂಡಿ ಆಚರಣೆ (ಸಂಗ್ರಹ ಚಿತ್ರ)
ದಹಿ ಹಂಡಿ ಆಚರಣೆ (ಸಂಗ್ರಹ ಚಿತ್ರ)

ಮುಂಬೈ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಹಾರಾಷ್ಟ್ರದಲ್ಲಿ ಅದ್ಧೂರಿಯಾಗಿ ದಹಿ ಹಂಡಿ ಆಚರಣೆ ನಡೆಸಲಾಗುತ್ತಿದೆ. ಮುಂಬೈ ನಲ್ಲಿ ಸಂಭ್ರಮಾಚರಣೆ ಎಂದಿಗಿಂತಲೂ ಹೆಚ್ಚಾಗಿದೆ. 

2 ವರ್ಷಗಳ ಬಳಿಕ ಮೊದಲ ಬಾರಿಗೆ ದಹಿ ಹಂಡಿ ಉತ್ಸವ ನಡೆಯುತ್ತಿದ್ದು, ಯುವಕರು ಅಲಂಕಾರ ಮಾಡಿಕೊಂಡು, ಮೇಲೆ ಕಟ್ಟಿರುವ ಗಡಿಗೆಯನ್ನು ಮಾನವ ಪಿರಮಿಡ್ ಮೂಲಕ ಏರಿ ಒಡೆದು ಸಂಭ್ರಮಿಸುತ್ತಾರೆ. ಒಗ್ಗಟ್ಟಿನಲ್ಲಿ ವಿಜಯವಿದೆ ಎಂಬುದರ ಸಂಕೇತವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತದೆ.

ಈ ಬಾರಿ ನಡೆದ ದಹಿ ಹಂಡಿ ಕಾರ್ಯಕ್ರಮದಲ್ಲಿ ಅವಘಡ ಉಂಟಾಗಿ 24 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಈ ಪೈಕಿ 19 ಮಂದಿಯನ್ನು ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದ್ದರೆ, ಐವರು ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ, ಚಿಕಿತ್ಸೆ ಪಡೆಯುತ್ತಿರುವವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಹಿ ಹಂಡಿ ಒಡೆಯುವುದಕ್ಕೆ ಪೈಪೋಟಿ ಇರಲಿದ್ದು, ಬಹುಮಾನವನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ವೇಷ ಧರಿಸಿದ ಯುವಕರು ಕೃಷ್ಣ ಜನ್ಮಾಷ್ಟಮಿಯಂದು ದಹಿ ಹಂಡಿ ಒಡೆಯುವ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com