ಹಿಮಾಚಲ ಪ್ರದೇಶ: ಪ್ರವಾಹ, ಭೂ ಕುಸಿತದಲ್ಲಿ ಆರು ಜನರ ಸಾವು, 14 ಮಂದಿ ಕಣ್ಮರೆ
ಹಿಮಾಚಲ ಪ್ರದೇಶದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂ ಕುಸಿತದಲ್ಲಿ ಆರು ಜನರು ಸಾವನ್ನಪ್ಪಿದ್ದು, 13 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Published: 20th August 2022 12:25 PM | Last Updated: 20th August 2022 03:41 PM | A+A A-

ಪ್ರವಾಹದಿಂದ ಹಾನಿಯಾದ ರೈಲ್ವೆ ಸೇತುವೆ
ಮಂಡಿ: ಹಿಮಾಚಲ ಪ್ರದೇಶದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂ ಕುಸಿತದಲ್ಲಿ ಆರು ಜನರು ಸಾವನ್ನಪ್ಪಿದ್ದು, 13 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮಂಡಿ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂ ಕುಸಿತದಲ್ಲಿ ಒಬ್ಬರು ಸಾವನ್ನಪ್ಪಿದ್ದು, 13 ಮಂದಿ ಕಣ್ಮರೆಯಾಗಿದ್ದಾರೆ. ಚಂಬಾ ಜಿಲ್ಲೆಯಲ್ಲಿ ಮನೆಯೊಂದು ಕುಸಿದು ಬಿದ್ದ ನಂತರ ಮೂವರು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಂಡಿ ಬಳಿ ಮನೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಬಾಲಕಿಯೊಬ್ಬಳ ಮೃತ ದೇಹ ಸಿಕ್ಕಿದ್ದು, ಆಕೆಯ ಐವರು ಕುಟುಂಬ ಸದಸ್ಯರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮೇಘಸ್ಫೋಟದ ನಂತರ ಬಾಗಿ ಮತ್ತು ಹಳೆಯ ಕಾಟೊಲಾ ಪ್ರದೇಶ ನಡುವಿನ ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಶಾನ್ ಗ್ರಾಮದಲ್ಲಿ ಭೂ ಕುಸಿತದ ನಂತರ ಮತ್ತೊಂದು ಕುಟುಂಬದ ಎಂಟು ಸದಸ್ಯರು ಮನೆಯ ಅವಶೇಷಗಳಡಿ ಸಿಲುಕಿದ್ದಾರೆ.
#WATCH | Himachal Pradesh: The railway bridge on Chakki river in Himachal Pradesh's Kangra district damaged due to flash flood, and collapsed today morning. The water in the river is yet to recede: Northern Railways pic.twitter.com/ApmVkwAkB8
— ANI (@ANI) August 20, 2022
ಆದಾಗ್ಯೂ, ಮೃತ ದೇಹಗಳನ್ನು ಈವರೆಗೂ ಹೊರಗೆ ತೆಗೆಯಲು ಆಗಿಲ್ಲ . ಪ್ರವಾಹ ಮತ್ತು ಭೂಕುಸಿತದ ನಂತರ ಮಂಡಿ ಜಿಲ್ಲೆಯ ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಅನೇಕ ವಾಹನಗಳು ಹಾನಿಯಾಗಿವೆಎಂದು ಅವರು ತಿಳಿಸಿದ್ದಾರೆ.