ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಮರುನಾಮಕರಣ ಮಾಡಲಿರುವ ಕೇಂದ್ರ ಸರ್ಕಾರ: ಏಕೆ? ಏನು? ಇಂತಿದೆ ವಿವರ...

ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ), 2013 ಗೆ ಮರು ನಾಮಕರಣ ಮಾಡಲು ಮುಂದಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ

ನವದೆಹಲಿ: ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ), 2013 ಗೆ ಮರು ನಾಮಕರಣ ಮಾಡಲು ಮುಂದಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ದೇಶಾದ್ಯಂತ ಹಂಚಿಕೆಯಾಗುತ್ತಿರುವ ಆಹಾರ ಅಧಾನ್ಯಗಳ ಪ್ರಮಾಣ ಮತ್ತು ಬೆಲೆಯಲ್ಲಿ ಏಕರೂಪತೆ ಕಾಯ್ದುಕೊಳ್ಳುವುದಕ್ಕಾಗಿ  ಎನ್ಎಫ್ಎಸ್ಎ ಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಖಾದ್ಯ ಸುರಕ್ಷಾ ಯೋಜನೆ ಎಂದು ಮರು ನಾಮಕರಣ ಮಾಡಲಾಗುತ್ತಿದೆ.

ಪ್ರಮಾಣ ಮತ್ತು ಬೆಲೆಗಳಲ್ಲಿ ಏಕರೂಪತೆ ಕಾಯ್ದುಕೊಳ್ಳುವುದರ ಜೊತೆಗೆ, ಬದಲಾವಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಪಡೆದು ಎನ್ಎಫ್ಎಸ್ಎ ಜಾರಿಗೆ ನಾಮಮಾತ್ರದ ಮೊತ್ತ ನೀಡಿ ತಮ್ಮದೇ ಯೋಜನೆಯ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿರುವುದೂ ಪ್ರಮುಖ ಕಾರಣವಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ)ಗೆ ಬದಲಾವಣೆ ತರುವ ಸಂಬಂಧ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಕ್ಯಾಬಿನೆಟ್ ಟಿಪ್ಪಣಿ ಕರಡನ್ನು ಸಿದ್ಧಪಡಿಸಿದ್ದು,  ಕಾನೂನು ಮತ್ತು ಹಣಕಾಸು ಸಚಿವಾಲಯಗಳು ಮತ್ತು ಇತರ ಸಂಬಂಧಿತ ಇಲಾಖೆಗಳಿಂದ ವಿಷಯದ ಬಗ್ಗೆ ಅಭಿಪ್ರಾಯ ಕೇಳಿದೆ.

ರಾಜ್ಯ ಸರ್ಕಾರಗಳು ಎನ್ಎಫ್ಎಸ್ಎ ರೂಪದಲ್ಲಿನ ತಮ್ಮದೇ ಯೋಜನೆಯ ಮೂಲಕ ಉಚಿತ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ನೀಡುತ್ತದೆ. ಕೆಲವೊಮ್ಮೆ ಕೇಂದ್ರದ ಕಾಯ್ದೆಯಡಿಯಲ್ಲಿ ಕಡ್ಡಾಯಗೊಳಿಸಲಾಗಿರುವ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ಆದ್ದರಿಂದ ಈ ರೀತಿಯ ವ್ಯತ್ಯಾಸಗಳನ್ನು ತಡೆಯುವುದಕ್ಕೆ ಹಾಗೂ ರಾಜ್ಯ ಸರ್ಕಾರಗಳು ಎನ್ಎಫ್ಎಸ್ಎ ಮಾದರಿಯ ಯೋಜನೆಗಳನ್ನು ನಡೆಸುವುದರಿಂದ ರಾಜ್ಯ ಸರ್ಕಾರಗಳನ್ನು ತಪ್ಪಿಸುವುದಕ್ಕಾಗಿ ಕಾಯ್ದೆಯ ಹೆಸರು ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com